Thursday, June 4, 2026
Homeಕರಾವಳಿಉಡುಪಿಉಡುಪಿ: ಮಗಳ ಬರ್ತಡೇಗೆ ಕೇಕ್ ತರಲು ತೆರಳಿದ್ದ ಬಸ್ ಚಾಲಕ ಅಪಘಾತಕ್ಕೆ ಬಲಿ

ಉಡುಪಿ: ಮಗಳ ಬರ್ತಡೇಗೆ ಕೇಕ್ ತರಲು ತೆರಳಿದ್ದ ಬಸ್ ಚಾಲಕ ಅಪಘಾತಕ್ಕೆ ಬಲಿ

- Advertisement -
- Advertisement -

ಉಡುಪಿ: ಮಗಳ ಬರ್ತಡೇಗೆ ಕೇಕ್ ತರಲು ತೆರಳಿದ್ದ ಬಸ್ ಚಾಲಕ ಅಪಘಾತಕ್ಕೆ ಬಲಿಯಾಗಿರುವ ಘಟನೆ ಉಡುಪಿಯ ದೊಡ್ಡಣಗುಡ್ಡೆ ಎಂಬಲ್ಲಿ ನಡೆದಿದೆ. ಎಪಿಎಂ ಸಿಟಿ ಬಸ್ ಚಾಲಕ ಮಂಜುನಾಥ್ (36) ಮೃತ ದುರ್ದೈವಿ.

ಮಂಜುನಾಥ್ ನಿನ್ನೆ ಸಂಜೆ ತಮ್ಮ ಸ್ಕೂಟರ್ ನಲ್ಲಿ ಬಾಳಿಗ ಹಾಸ್ಪಿಟಲ್ ದೊಡ್ಡಣಗುಡ್ಡೆಯಿಂದ ಮಗಳ ಬರ್ತಡೇಗೆಂದು ಕೇಕ್ ತೆಗೆದುಕೊಂಡು ಪೆರಂಪಳ್ಳಿಯ ತಮ್ಮ ಮನೆಗೆ ಹೋಗುತ್ತಿದ್ದರು.

ಈ ವೇಳೆ ನೀರಿನ ಟ್ಯಾಂಕರ್ ಅವರ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!