Wednesday, May 8, 2024
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳ ಪೊಲೀಸರಿಗೆ 42 ಸಿಮ್ ಕಾರ್ಡ್ ಪತ್ತೆ ಪ್ರಕರಣ:ವಿದೇಶಿ ಕರೆನ್ಸಿ ದಂಧೆ ಭೇದಿಸಲು...

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸರಿಗೆ 42 ಸಿಮ್ ಕಾರ್ಡ್ ಪತ್ತೆ ಪ್ರಕರಣ:ವಿದೇಶಿ ಕರೆನ್ಸಿ ದಂಧೆ ಭೇದಿಸಲು ಇಡಿ ಸಂಸ್ಥೆ ಎಂಟ್ರಿ

spot_img
- Advertisement -
- Advertisement -

ಬೆಳ್ತಂಗಡಿ : ನಿಗೂಢ‌ ಕಾರ್ಯ ಸಾಧನೆ ಮಾಡಲು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಸಂಗ್ರಹಿಸಿಕೊಂಡು ಬೆಂಗಳೂರು ಕಡೆ ಪ್ರಯಾಣ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿದ್ದ ಪ್ರಕರಣ ಸಂಬಂಧ ಇದೀಗ ಐದು ಜನ ಆರೋಪಿಗಳು ವಿದೇಶಿ ಕರೆನ್ಸಿ ದಂಧೆ ನಂಟು ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ..‌ಈ ಪ್ರಕರಣ ಭೇದಿಸಲು ಜಾರಿ ನಿರ್ದೇಶನಾಲಯ (ಇಡಿ) ಸಂಸ್ಥೆ ಎಂಟ್ರಿಯಾಗಿದೆ‌.

ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಎಂಟ್ರಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಫೆ.1 ರಂದು ಪ್ರಕರಣ ಐದು ಜನ ಆರೋಪಿಗಳ ಮೇಲೆ ದಾಖಲಾದ ಮೋಸ ವಂಚನೆ ಅಥವಾ ನಿಗೂಢ ಕಾರ್ಯಸಾಧನೆ ಮಾಡುವ ಪ್ರಕರಣದ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳು ವಿದೇಶಿ ಕರೆನ್ಸಿ ದಂಧೆಯಲ್ಲಿ ಐದು ಜನ ಆರೋಪಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇಡಿ)ಅಧಿಕಾರಿಗಳಿಗೆ ಕರೆ ಮಾಡಿ ಮೌಖಿಕ ಮಾಹಿತಿ ನೀಡಿದ್ದರು. ಅದರಂತೆ ಧರ್ಮಸ್ಥಳ ಪೊಲೀಸರು ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಗೆ ವಿದೇಶಿ ನಂಟು ಇರುವ ಕಾರಣದಿಂದ ಹೆಚ್ಚಿನ ತನಿಖೆ ನಡೆಸಲು ಲಿಖಿತ ರೂಪದಲ್ಲಿ ಪತ್ರವನ್ನು ಬರೆದಿದ್ದರು. ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಕುಮಾರ್ ಅವರ ಕಚೇರಿಗೆ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆಗಮಿಸಿ ಐದು ಜನ ಆರೋಪಿಗಳನ್ನು ಕಚೇರಿಗೆ ಕರೆಸಿ ಖುದ್ದಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿ ಹೋಗಿದ್ದಾರೆ. ಇನ್ನೂ ಈ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಹೊಸ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ‌.

ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಐದು ಜನ ಅಪರಿಚಿತ ಯುವಕರು ವ್ಯವಹಾರಕ್ಕೆಂದು ಹೇಳಿ ಅಧಿಕ ಪ್ರಮಾಣದ ಸಿಮ್ ಕಾರ್ಡ್ ಖರೀದಿ ಮಾಡಿಕೊಂಡು ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಎಎಸ್ಐ ಸ್ಯಾಮುವೆಲ್ ಅವರು ಮತ್ತು ಸಿಬ್ಬಂದಿ ಫೆ.1 ರಂದು ಸಂಜೆ 4 ಗಂಟೆ ಸುಮಾರಿಗೆ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಯುವಕರಿಗಾಗಿ ಹುಡುಕಾಟ ನಡೆಸಿದಾಗ ಐದು ಮಂದಿ ಗುಂಪು ಸೇರಿಕೊಂಡಿದ್ದಾಗ ಯುವಕರನ್ನು ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಯುವಕರ ಬ್ಯಾಗ್ ನಲ್ಲಿದ್ದ ಬೇರೆ ಬೇರೆ ವಿಳಾಸದ ಹೆಸರಿನಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದ 42 ಸಿಮ್ ಕಾರ್ಡ್ ಮತ್ತು ಅವರ ಬಳಿ ಇದ್ದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದರು.

ಐದು ಜನ ಬಂಧಿತ ಆರೋಪಿಗಳ ವಿವರ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಫೀಕ್ ಮಗ ರಮೀಝ್(20) , ಬಂಟ್ವಾಳ ತಾಲೂಕಿನ ಬಡಗಕಜೆಕರ್ ಗ್ರಾಮದ ಪಾಂಡವರಕಲ್ಲು ನಿವಾಸಿ ಇಬ್ರಾಹಿಂ ಮಗ ಅಕ್ಬರ್ ಆಲಿ(24), ಬೆಳ್ತಂಗಡಿ ನಗರದ ಸಂಜಯನಗರ ನಿವಾಸಿ ಹಸನಬ್ಬ ಮಗ ಮೊಹಮ್ಮದ್ ಮುಸ್ತಫಾ(22) , ಬೆಳ್ತಂಗಡಿ ತಾಲೂಕಿನ ಪಡಂಗಡಿ ಬದ್ರಿಯಾ ಮನ್ಝೀಲ್ ನಿವಾಸಿ ಇಸ್ಮಾಯಿಲ್ ಮಗ ಮಹಮ್ಮದ್ ಸಾಧಿಕ್(27) ಮತ್ತು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ (17) ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿತ್ತು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಧರ್ಮಸ್ಥಳ ಪೊಲೀಸ್ ಠಾಣೆಯ ಎಎಸ್ಐ ಸ್ಯಾಮುವೆಲು ಅವರು ನೀಡಿದ (ಸುಮೊಟೊ ಕೇಸ್)ದೂರಿನ ಮೇರೆಗೆ ಐದು ಜನ ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಐಪಿಸಿ 1860(U/s-420,120B ಜೊತೆಗೆ 34)( ವಂಚನೆ, ಒಳಸಂಚು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಇಷ್ಟು ಮಟ್ಟದಲ್ಲಿ ವಿವಿಧ ವ್ಯಕ್ತಿಗಳಿಂದ ಸಿಮ್ ಕಾರ್ಡ್ ಖರೀದಿಸಿ ಯಾರಿಗೆ ರವಾನೆಯಾಗುತ್ತಿತ್ತು ಮತ್ತು ಯಾಕೆ ಬಳಕೆ ಮಾಡುತ್ತಿದ್ದರು ಎನ್ನುವುದರ ಬಗ್ಗೆ ತನಿಖೆಯನ್ನು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದ ನುರಿತ ಕ್ರೈಂ ಸಿಬ್ಬಂದಿ ತಂಡ ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳು, ಸಿಮ್ ಖರೀದಿಸಲು ದಾಖಲೆ ನೀಡಿದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ನಲ್ಲಿ ಮೊದಲು ವರದಿ ಭಿತ್ತರ: ಪ್ರಕರಣದ ಬಗ್ಗೆ ಮೊಟ್ಟ ಮೊದಲು ವರದಿ ಮಾಡಿದೆ. ಧರ್ಮಸ್ಥಳ ಪೊಲೀಸರು ಸರಿಯಾದ ತನಿಖೆ ನಡೆಸಿದ್ರೆ ನೈಜ ದಂಧೆಗಳ ನಿಗೂಢ ಸ್ಫೋಟಕ ವಿಚಾರಗಳು ಹೊರಬರಲಿದೆ ಎಂದು ಎಕ್ಸ್ಲೂಸಿವ್ ವರದಿಯನ್ನು ಫೆ.4 ರಂದು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಮಾಡಿ ಅಧಿಕಾರಿಗಳ ಬೆಳಕು ಚೆಲ್ಲಿತ್ತು.

- Advertisement -
spot_img

Latest News

error: Content is protected !!