Friday, June 5, 2026
Homeಕರಾವಳಿಉಡುಪಿಕಾರ್ಕಳ; ವೀಡಿಯೋಗ್ರಫಿ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ವೀಡಿಯೋಗ್ರಾಫರ್ ನಿಧನ

ಕಾರ್ಕಳ; ವೀಡಿಯೋಗ್ರಫಿ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ವೀಡಿಯೋಗ್ರಾಫರ್ ನಿಧನ

- Advertisement -
- Advertisement -

ಕಾರ್ಕಳ; ವೀಡಿಯೋಗ್ರಫಿ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ವೀಡಿಯೋಗ್ರಾಫರ್ ನಿಧನವಾಗಿರುವ ಘಟನೆ ಕಾರ್ಕಳದ ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್ ಶೆಟ್ಟಿ (45) ಮೃತ ದುರ್ದೈವಿ. ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ ಗೃಹಪ್ರವೇಶದ ವಿಡಿಯೋಗ್ರಫಿ ಮಾಡುತ್ತಿದ್ದಾಗ ಅವರು ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ದೀಪಕ್ ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!