Thursday, May 16, 2024
HomeUncategorizedಬೆಳ್ತಂಗಡಿಯಲ್ಲಿ ಬಂಟರ ಸಮಾವೇಶ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಬೆಳ್ತಂಗಡಿಯಲ್ಲಿ ಬಂಟರ ಸಮಾವೇಶ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

spot_img
- Advertisement -
- Advertisement -

ಬೆಳ್ತಂಗಡಿ : ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಬಂಟರ ಸಮಾವೇಶವು ಜೂ.5 ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ಜರುಗಿತು. ಗುರ್ಮೆ ಫೌಂಡೇಶನ್ ಇದರ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ದೀಪ ಪ್ರಜ್ವಲನೆ ಮಾಡಿ ಶುಭಹಾರೈಸಿದರು.


ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಎಲ್ಲಾ ಕ್ಷೇತ್ರದಲ್ಲಿ ನಾಯಕತ್ವ ಗುಣ ಇರುವುದು ಬಂಟರಲ್ಲಿ ಇಂತಹ ಸಮಾವೇಶದಿಂದ ಸಮುದಾಯ ಒಟ್ಟಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಬಂಟರನ್ನು ಯಾವಾಗಲೂ ನಂಬಬಹುದು ಬಂಟರು ತಾನು ಬೆಳೆದು ತನ್ನೊಂದಿಗೆ ಇತರರನ್ನು ಬೆಳೆಸುವ ಗುಣ ಬಂಟರಲ್ಲಿದೆ ಎಂದರು.


ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಳುಕೂಟ ಬರೋಡ ಅಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ ಅಜೆಕಾರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಉದಯ್‌ ಕುಮಾರ್ ಶೆಟ್ಟಿ ಮುನಿಯಾಲು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಬಂಟರ ಸಂಘದಿಂದ ನವಶಕ್ತಿ ಶಶಿಧರ್ ಶೆಟ್ಟಿಯವರಿಗೆ ಬಂಟ ಸೇವಾ ಸಿಂಧು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಂಟ ಸಮಾಜದ ವಿವಿಧ ಕ್ಷೇತ್ರದ ಸಾಧಕರಾದ ಡಾ. ರಾಧಕೃಷ್ಣ ಶೆಟ್ಟಿ (ಶಿಕ್ಷಣ), ಆಶ್ವಲ್ ರೈ (ಕ್ರೀಡೆ), ರಾಜುಶೆಟ್ಟಿ (ಕೃಷಿ), ರಿಶೀಕ್ ಶೆಟ್ಟಿ (ಎಸ್.ಎಸ್.ಎಲ್.ಸಿ) ಕ್ಷೀತಿ ರೈ ಧರ್ಮಸ್ಥಳ (ಯುವ ಪ್ರತಿಭೆ), ಚಂದ್ರ ಶೇಖರ್ ಅಜಿಲ (ದೈವ ಆರಾಧನೆ), ಪ್ರಜ್ವಲ್ ಕುಮಾರ್ (ಯಕ್ಷಗಾನ), ಬೋಜ ಶೆಟ್ಟಿ ಪೆರಂದಿಲೆ(ನಾಟಿವೈದ್ಯೆ), ನಾರಾಯಣ ಶೆಟ್ಟಿ ಮುಂಡಾಜೆ ( ಜಾನಪದ), ಮಂಜುನಾಥ ರೈ (ಪ್ರತಿಕೋದ್ಯಮ)ಸನ್ಮಾನ ಮಾಡಲಾಯಿತು.


ಬಂಟರ ಸಂಘದ ಕೋಶಾಧಿಕಾರಿ ಪಿ ಹೆಚ್ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ, ಪ್ರಸ್ತಾವಣೆ ಗೈದರು.
ವೇದಿಕೆಯಲ್ಲಿ ಬಂಟರ ಸಂಘದ ಕಾರ್ಯದರ್ಶಿ ರಾಜುಶೆಟ್ಟಿ ಬೆಂಗತ್ಯಾರು, ಜತೆಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಬಂಟರ ಯುವ ವಿಭಾಗದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ಶ್ರೀಮತಿ ಸಾರಿಕ ಡಿ ಶೆಟ್ಟಿ, ಹಾಗೂ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!