Sunday, June 7, 2026
Homeತಾಜಾ ಸುದ್ದಿಬೀದಿ ದೀಪ ಕದ್ದು ದನದ ತಲೆಬುರುಡೆ ಹಾಕಿ ಹೋದ ಕಿಡಿಗೇಡಿಗಳು

ಬೀದಿ ದೀಪ ಕದ್ದು ದನದ ತಲೆಬುರುಡೆ ಹಾಕಿ ಹೋದ ಕಿಡಿಗೇಡಿಗಳು

- Advertisement -
- Advertisement -

ಬೆಳಗಾವಿ: ಬೀದಿ ದೀಪ ಕದ್ದು ಕಿಡಿಗೇಡಿಗಳು ದನದ ತಲೆ ಬುರುಡೆ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ.

ಗೋಕಾಕ್ ಫಾಲ್ಸ್ ನಿಂದ ಗೋಕಾಕ್ ನಗರಕ್ಕೆ ಬರುವ ದಾರಿ ಮಧ್ಯೆ ಅಳವಡಿಸಲ್ಪಟ್ಟಿದ್ದ ವಿದ್ಯುತ್ ದೀಪ ತೆಗೆದಿರುವ ಕಿಡಗೇಡಿಗಳು, ಕಂಬಕ್ಕೆ ದನದ ಕೊಂಬು ಇರುವ ತಲೆಬುರುಡೆ ಹಾಕಿ ಹೋಗಿದ್ದಾರೆ.

ಘಟನೆ ‌ನಡೆದು ಮೂರು ದಿನಗಳು ಕಳೆದರೂ ಸಹ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಲಾಗಿದೆ.

ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!