- Advertisement -
- Advertisement -
ಬೆಂಗಳೂರು: 2025-26ನೇ ಸಾಲಿನ ಬಜೆಟ್ ಅನ್ನು ಮಾರ್ಚ್ 7 ರಂದು ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಅವರು ರೈತ ಮುಖಂಡರ ಜೊತೆ ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಿ ಈ ಕುರಿತಂತೆ ಮಾತನಾಡಿದರು. ಮಾರ್ಚ್ 3 ರಿಂದ ಅಧಿವೇಶನ ಪ್ರಾರಂಭವಾಗಲಿದ್ದು, ಅದೇ ದಿನ ರಾಜ್ಯಪಾಲರು ಜಂಟಿ ಸದನವನ್ನ ಉದ್ದೇಶಿ ಮಾತನಾಡಲಿದ್ದಾರೆ. ಮಂಗಳವಾರ, ಬುಧವಾರ ಮತ್ತು ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾರ್ಚ್ 7 ರಂದು ಬಜೆಟ್ ಮಂಡನೆ ಮಾಡಲಾಗುವುದು. ಬಜೆಟ್ ಮಂಡಿಸಿದ ಬಳಿಕ ಅದರ ಮೇಲೆ ಚರ್ಚೆ ನಡೆದು ಮಾರ್ಚ್ ಕೊನೆಯಲ್ಲಿ ಉತ್ತರ ಕೊಡುವೆ. ಅಧಿವೇಶನ ಎಷ್ಟು ದಿನ ನಡೆಯಬೇಕು ಅಂತ ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದರು.
- Advertisement -