Wednesday, June 24, 2026
Homeತಾಜಾ ಸುದ್ದಿನನ್ನ ಮೇಲೆ ದಾಖಲಾಗಿರುವ ಕೇಸ್ ಕುರಿತಂತೆ ಕಾನೂನು ರೀತಿಯಾಗಿ ಹೋರಾಟ ಮಾಡುತ್ತೇನೆ; ಮಾಜಿ ಸಿಎಂ ಬಿ...

ನನ್ನ ಮೇಲೆ ದಾಖಲಾಗಿರುವ ಕೇಸ್ ಕುರಿತಂತೆ ಕಾನೂನು ರೀತಿಯಾಗಿ ಹೋರಾಟ ಮಾಡುತ್ತೇನೆ; ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿಕೆ

- Advertisement -
- Advertisement -

ಬೆಂಗಳೂರು : ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಪಟ್ಟಂತೆ ಕಾನೂನು ಹೋರಾಟ ಮಾಡಿ ಎಲ್ಲವನ್ನು ಎದುರಿಸುತ್ತೇನೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ತಿಂಗಳು ಹಿಂದೆ ತಾಯಿ ಮಗಳು ಅನೇಕ ಸರಿ ಬಂದು ಹೋಗುತ್ತಿದ್ದರು.ನಾನು ಹತ್ರ ಸೇರಿಸಲಿಲ್ಲ. ನನ್ನ ಬಳಿ ಬಂದು ಕಣ್ಣೀರು ಹಾಕಿದ್ದಾರೆ ಅಂತ ಒಳಗಡೆ ಕರೆಸಿಕೊಂಡು ಕುಳಿತುಕೊಂಡು ಕೇಳಿದಾಗ ತಾಯಿ ಮಗಳು ಇಬ್ಬರು ಸಮಸ್ಯೆ ಕೇಳಿದ್ದೇನೆ. ತುಂಬಾ ಅನ್ಯಾಯ ಆಗಿದೆ ಹೀಗೆ ಅನೇಕ ವಿಚಾರ ಹೇಳಿದರು, ನಾನು ಪೊಲೀಸ್ ಕಮಿಷನರ್ ಗೆ ಕಾಲ್ ಮಾಡಿ ಇವರಿಗೆ ಅನ್ಯಾಯ ಆಗಿದೆ ನ್ಯಾಯ ಕೊಡಿಸಿ ಎಂದು ದಯಾನಂದಗೆ ಕರೆ ಮಾಡಿ ಅವರತ್ರ ಕಳಿಸಿಕೊಟ್ಟಿದ್ದೇವೆ ಅದಾದ ಮೇಲೆ ನನ್ನ ಮೇಲೆ ಏನೇನೋ ಮಾತಾಡೋಕೆ ಶುರು ಮಾಡಿದ್ದಾರೆ ಎಂದಿದ್ದಾರೆ.

ಮಹಿಳೆಗೆ ಯಾಕೋ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳೆಂದು ಕಂಡು ಬಂದಿದ್ದರಿಂದ ಕಮಿಷನರ ಹತ್ತಿರ ಕಳಿಸಿಕೊಟ್ಟೆ. ಉಪಕಾರ ಮಾಡಲು ಹೋಗಿ ಬೇರೆ ರೀತಿ ಮಾಡಿ FIR ಆಗಿದೆ.ಕಷ್ಟ ಇದೆ ಅಂತ ಸ್ವಲ್ಪ ದುಡ್ಡು ಕೊಟ್ಟು ಕಳಿಸಿದೆ. ಆದರೆ ಉಪಕಾರ ಮಾಡಿದರು ಕೂಡ ಈ ರೀತಿ ನನ್ನ ಮೇಲೆ ಆರೋಪ ಬಂದಿದೆ. ಕಷ್ಟ ಇದೆ ಅಂತ ದುಡ್ಡು ಕೂಡ ಕೊಟ್ಟು ಕಳುಸಿದೆ. ಆದ್ದರಿಂದ  ಎಲ್ಲವನ್ನು ಕಾನೂನು ರೀತಿಯಾಗಿ ಎದುರಿಸೋಣ. ನಾನು ಈ ರೀತಿ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

- Advertisement -

Latest News

error: Content is protected !!