Monday, June 8, 2026
HomeUncategorizedಉಡುಪಿ : ಲಾರಿ ಹರಿದು ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸಾವು

ಉಡುಪಿ : ಲಾರಿ ಹರಿದು ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸಾವು

- Advertisement -
- Advertisement -

ಉಡುಪಿ : ಲಾರಿ ಹರಿದು ಪ್ರಥಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ರಸ್ತೆಯ ಕಾಗೇರಿ ಪ್ರದೇಶದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಗೇರಿ ಪ್ರದೇಶ ಕೋಟೇಶ್ವರದ ವರದರಾಜ ಶೆಟ್ಟಿ ಸರ್ಕಾರಿ ಕಾಲೇಜು ವಿದ್ಯಾರ್ಥಿ ಧನುಷ್ (19) ಮೃತ ದುರ್ದೈವಿ.ಕಾಲೇಜು ಮುಗಿಸಿ ಸ್ನೇಹಿತರ ಜೊತೆಗೆ ಧನುಶ್ ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ಈ ವೇಳೆ ಎದುರುನಿಂದ ಬರುತ್ತಿದ್ದ ಕಾರು ತಪ್ಪಿಸಲು ಹೋಗಿ ಲಾರಿ ಚಾಲಕ ಧನುಷ್ ಡಿಕ್ಕಿ ಹೊಡೆದಿದ್ದಾನೆ.ಈ ವೇಳೆ ಲಾರಿ ಹರಿದು ವಿದ್ಯಾರ್ಥಿ ಧನುಷ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!