- Advertisement -


- Advertisement -
ಚಿಕ್ಕಮಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ನಾಳೆ ಹಸೆಮಣೆ ಏರಬೇಕಾದ ವಧು ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಜ್ಜಂಪುರದ ಸೊಲ್ಲಾಪುರ ನಿವಾಸಿ ಶೃತಿ ಹೃದಯಾಘಾತಕ್ಕೆ ಒಳಗಾದ ವಧು.
ಶೃತಿ ಅವರಿಗೆ ದಿಲೀಪ್ ಎಂಬುವವರ ಜೊತೆ ನಿಗದಿಯಾಗಿತ್ತು. ನಾಳೆ ಮದುವೆ ಸಮಾರಂಭ ನಡೆಯೋದಿತ್ತು. ಆದರೆ ದುರಂತ ಅಂದ್ರೆ ಇಂದು ಶೃತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ನೀರವ ಮೌನ ಆವರಿಸಿದೆ.
- Advertisement -


