Wednesday, June 24, 2026
Homeಕೊಡಗು ಕೊಡಗು;  ಮದುವೆ ಹಾಲ್ ನಲ್ಲಿ  ಇಟ್ಟಿದ್ದ ವಧುವಿನ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

 ಕೊಡಗು;  ಮದುವೆ ಹಾಲ್ ನಲ್ಲಿ  ಇಟ್ಟಿದ್ದ ವಧುವಿನ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

- Advertisement -
- Advertisement -

 ಕೊಡಗು;  ಮದುವೆ ಹಾಲ್ ನಲ್ಲಿ ವಧುವಿಗೆ ತೊಡಿಸಲೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರೈತ ಭವನದಲ್ಲಿ ನಡೆದಿದೆ.

ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನಿಂದಲೇ ಕಳ್ಳತನ ಆಗಿದೆ. ಒಂದು ಚಿನ್ನದ ಕಡಗ, ಒಂದು ಜತೆ ಓಲೆ, ಚಿನ್ನದ ನೆಕ್ಲೇಸ್ ಜೊತೆಗೆ 5,000 ರೂ. ಕದ್ದು ಪರಾರಿಯಾಗಿದ್ದಾನೆ ಎಂದು ವಧುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಘಟನೆ ಸಂಬಂಧ ಕುಶಾಲನಗರ ನಗರ ಠಾಣೆಗೆ ವಧುವಿನ ಪೋಷಕರು ದೂರು ನೀಡಿದ್ದಾರೆ. ನಂತರ ಮದುವೆ ಮಂಟಪಕ್ಕೆ ತೆರಳಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!