Thursday, June 4, 2026
Homeತಾಜಾ ಸುದ್ದಿಮಂಜೇಶ್ವರ: ವಿಧಾನಸಭೆ ಚುನಾವಣೆ ವೇಳೆ ಲಂಚ ನೀಡಿದ ಪ್ರಕರಣ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ಜಾಮೀನು...

ಮಂಜೇಶ್ವರ: ವಿಧಾನಸಭೆ ಚುನಾವಣೆ ವೇಳೆ ಲಂಚ ನೀಡಿದ ಪ್ರಕರಣ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

- Advertisement -
- Advertisement -

ಮಂಜೇಶ್ವರ: ಮಂಜೇಶ್ವರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಭಾರೀ ಸುದ್ದಿಯಾಗಿದ್ದ ಲಂಚ ಪ್ರಕರಣದಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಕ್ರೈಂ ಬ್ರಾಂಚ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಕೆ. ಸುರೇಂದ್ರನ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಇಲಾಖೆ ಆರೋಪ ಹೆಚ್ಚುವರಿಯಾಗಿ ಹೊರಿಸಲಾಗಿದೆ. ಇದು ಜಾಮೀನು ರಹಿತ ಸೆಕ್ಷನ್ ಪ್ರಕರಣವಾಗಿದ್ದು, ಕೆ ಸುರೇಂದ್ರನ್ ಸೇರಿದಂತೆ ಆರು ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರ ಅವರ ಉಮೇದುವಾರಿಕೆಯನ್ನು ಹಿಂಪಡೆಯಲು 2.5 ಲಕ್ಷ ರೂ. ಹಾಗೂ ಸ್ಮಾರ್ಟ್‌ಫೋನ್ ನೀಡಿರುವ ಬಗ್ಗೆ ಪ್ರಕರಣದಲ್ಲಿ ಆರೋಪಿಸಲಾಗಿದೆ.

- Advertisement -

Latest News

error: Content is protected !!