Saturday, June 6, 2026
Homeತಾಜಾ ಸುದ್ದಿತಂದೆಯ ವಿರುದ್ಧ ಪೊಲೀಸರಿಗೆ ದೂರು‌ ನೀಡಿದ 7 ವರ್ಷದ ಬಾಲಕ

ತಂದೆಯ ವಿರುದ್ಧ ಪೊಲೀಸರಿಗೆ ದೂರು‌ ನೀಡಿದ 7 ವರ್ಷದ ಬಾಲಕ

- Advertisement -
- Advertisement -

ತೆಲಂಗಾಣ; ತಂದೆಯ ವಿರುದ್ಧ 7 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು‌ ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣ ಮುಸ್ತಾಬಾದ್ ನಿವಾಸಿ ಬಾಲಕೃಷ್ಣ ಎಂಬಾತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ. ಕುಡಿತದ ಅಮಲಿನಲ್ಲಿ ತನ್ನ ಪತ್ನಿಯ ಮೇಲೆ ದಿನನಿತ್ಯ ಹಲ್ಲೆ ಮಾಡುತ್ತಿದ್ದು,ಇದನ್ನು ನೋಡಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಏಳು ವರ್ಷದ ಬಾಲಕ ಭರತ್ ರೋಸಿ ಹೋಗಿದ್ದ.ಬಾಲಕ ಎಲ್ಲಾ ವಿಷಯವನ್ನು ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ವರಲುಗೆ ಮನವರಿಕೆ ಮಾಡಿ‌ಕೊಟ್ಟಿದ್ದಾನೆ.

ಬಾಲಕನ ಕಥೆಯನ್ನೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡು ಆತನ ತಂದೆ ಬಾಲಕೃಷ್ಣನನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಇನ್ನೊಮ್ಮೆ ಈ ರೀತಿ ಮಾಡಿದರೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

- Advertisement -

Latest News

error: Content is protected !!