Saturday, June 6, 2026
Homeಕರಾವಳಿಕಡಬ: ಪಿಕಪ್ ನಲ್ಲಿ ಹಿಂಸಾತ್ಮಕ‌ ರೀತಿಯಲ್ಲಿ ಜಾನುವಾರ ಸಾಗಾಟ: ವಾಹನ‌ ಸಮೇತ ಗೋವು ಸಾಗಾಟ ಮಾಡುತ್ತಿದ್ದವರನ್ನು...

ಕಡಬ: ಪಿಕಪ್ ನಲ್ಲಿ ಹಿಂಸಾತ್ಮಕ‌ ರೀತಿಯಲ್ಲಿ ಜಾನುವಾರ ಸಾಗಾಟ: ವಾಹನ‌ ಸಮೇತ ಗೋವು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ ಭಜರಂಗದಳ ಕಾರ್ಯಕರ್ತರು

- Advertisement -
- Advertisement -

ಕಡಬ: ಪಿಕಪ್ ವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ  ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಭಜರಂಗದಳ ಕಾರ್ಯಕರ್ತರು ವಾಹನ ತಡೆದು ಪೋಲಿಸರಿಗೆ ಒಪ್ಪಿಸಿದ ಘಟನೆ ಆ.31ರಂದು ಬೆಳ್ಳಂಬೆಳಿಗ್ಗೆ ಕೋಡಿಂಬಾಳದಲ್ಲಿ ನಡೆದಿದೆ.

ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಭಾಗದಿಂದ ಪಂಜ ಮಾರ್ಗವಾಗಿ ಕೋಡಿಂಬಾಳದಲ್ಲಿರುವ ಅಕ್ರಮ ಕಸಾಯಿಖಾನೆಯೊಂದಕ್ಕೆ ದನವನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗುತ್ತಿದೆ.

ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರು ಎಂದು ಸಂಘಟನೆಗಳು ಆರೋಪಿಸಿವೆ. ಕೋಡಿಂಬಾಳ ಸಮೀಪದ ಮುರಚೆಡವು ಎಂಬಲ್ಲಿ ವಾಹನ ತಡೆ ಹಿಡಿದ್ದಾರೆ. ಬಳಿಕ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿರುವುದಾಗಿ ತಿಳಿದು ಬಂದಿದೆ .ದನ ಸಾಗಾಟದ ವೇಳೆ ವಾಹನದಲ್ಲಿ ಮೂವರು ಇದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ

- Advertisement -

Latest News

error: Content is protected !!