Wednesday, June 26, 2024
Homeಕರಾವಳಿಕಾಸರಗೋಡುಕಾಸರಗೋಡು: ನದಿಯಲ್ಲಿ ಮುಳುಗಿ ಹತ್ತನೇ ತರಗತಿ ಬಾಲಕ ಸಾವು

ಕಾಸರಗೋಡು: ನದಿಯಲ್ಲಿ ಮುಳುಗಿ ಹತ್ತನೇ ತರಗತಿ ಬಾಲಕ ಸಾವು

spot_img
- Advertisement -
- Advertisement -

ಕಾಸರಗೋಡು: ನದಿಯಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿರುವ ಘಟನೆ ಕಾಞಂಗಾಡ್ ನ ಆರಾಯಿ ಎಂಬಲ್ಲಿ ನಡೆದಿದೆ. ಆರಾಯಿ ಬಾಕೋಟ್ ನ ಬಿ.ಕೆ. ಅಬ್ದುಲ್ ಕುಂಞಿ ಎಂಬವರ ಪುತ್ರ, ಹತ್ತನೇ ತರಗತಿಯ ವಿದ್ಯಾರ್ಥಿ ಬಿ.ಕೆ. ಮುಹಮ್ಮದ್ ಸಿನಾನ್ (16) ಮೃತ ಬಾಲಕ.

ಸಿನಾನ್  ಸಹಪಾಠಿಗಳ ಜೊತೆ ಸ್ನಾನಕ್ಕಿಳಿದಾಗ  ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.  ಮಂಗಳವಾರ ಬೆಳಗ್ಗೆ ಇಬ್ಬರು ಸ್ನೇಹಿತರ ಜೊತೆ ಆರಾಯಿ ನದಿಗೆ ಸ್ನಾನಕ್ಕಿಳಿದಿದ್ದು, ಸುಳಿಗೆ ಸಿಲುಕಿ ನೀರುಪಾಲಾಗಿದ್ದಾನೆ. ಸ್ಥಳೀಯರು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಮೃತದೇಹವನ್ನು ಕಾಞ೦ಗಾಡ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಒಪ್ಪಿಸಲಾಯಿತು.

- Advertisement -
spot_img

Latest News

error: Content is protected !!