Wednesday, June 3, 2026
Homeಕರಾವಳಿಕಾಸರಗೋಡುವಧೆ ಮಾಡಲು ಬಂದವರಿಗೆ ಒದೆ ಕೊಟ್ಟ ಕೋಣ!; ಕಾಸರಗೋಡಿನಲ್ಲಿ ನಡೆದಿದ್ದೆನ್ನಲಾದ ಘಟನೆಯಲ್ಲಿ ಮನೆ, ಕಾರು ಜಖಂ

ವಧೆ ಮಾಡಲು ಬಂದವರಿಗೆ ಒದೆ ಕೊಟ್ಟ ಕೋಣ!; ಕಾಸರಗೋಡಿನಲ್ಲಿ ನಡೆದಿದ್ದೆನ್ನಲಾದ ಘಟನೆಯಲ್ಲಿ ಮನೆ, ಕಾರು ಜಖಂ

- Advertisement -
- Advertisement -

ಕಾಸರಗೋಡು: ವಧೆ ಮಾಡಲು ತಂದ ಕೋಣ ರೊಚ್ಚಿಗೆದ್ದು ಮನೆ , ಕಾರು, ಗೇಟ್ ಧ್ವಂಸಗೊಳಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಕೋಣದ ಆರ್ಭಟಕ್ಕೆ ಮನೆ, ಗೇಟ್ ಮತ್ತು ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮನೆ ಮಂದಿ‌ ಮತ್ತು ಸ್ಥಳೀಯರು ಕಂಗಾಲಾಗಿ ಓಡಿದ್ದಾರೆ.

ಕಾಸರಗೋಡಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು,ಕಸಾಯಿಖಾನೆಗೆ ಒಯ್ಯಲು ಮುಂದಾದಾಗ ಸಿಟ್ಟಿಗೆದ್ದ ಕೋಣ ಅವಾಂತರ ನಡೆಸಿದೆ.ಕೋಣ ನಡೆಸಿದ ರಂಪಾಟದಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಸುತ್ತಮುತ್ತ ಇದ್ದವರನ್ನೂ ತಿವಿದು ಎಸೆದಿದೆ ಎನ್ನಲಾಗಿದೆ.

ಕೋಣದ ರೋಷಾವೇಶಕ್ಕೆ ಸ್ಥಳೀಯರು ಸುಸ್ತು ಹೊಡೆದಿದ್ದು, ರಂಪಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿದೆ.

- Advertisement -

Latest News

error: Content is protected !!