Friday, June 26, 2026
HomeUncategorizedಉಡುಪಿ: ಮರದಿಂದ ಬಿದ್ದು ಬಾಲಕ ಸಾವು

ಉಡುಪಿ: ಮರದಿಂದ ಬಿದ್ದು ಬಾಲಕ ಸಾವು

- Advertisement -
- Advertisement -

ಉಡುಪಿ: ಮರದಿಂದ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಶಿರೂರು ಗ್ರಾಮದ ಅರ್ಮೆ ಕರಿಕಟ್ಟೆ ಎಂಬಲ್ಲಿ ನಡೆದಿದೆ. ಶಿರೂರು ಗ್ರಾಮದ ಆರ್ಮೆ ಕರಿಕಟ್ಟೆಯ ಬಾತ್ಯಾ ಇರ್ಫಾನ್ ಎಂಬವರ ಮಗ ಬಾತ್ಯಾ ನೌಮನ್(15) ಮೃತ ದುರ್ದೈವಿ.

ಮಾ.12ರಂದು ಸ್ನೇಹಿತರೊಂದಿಗೆ ಮನೆ ಸಮೀಪ ಮಾವಿನ ಕಾಯಿ ತೆಗೆಯಲು ಮರ ಹತ್ತಿದ್ದ ನೌಮನ್, ಆಕಸ್ಮಿಕವಾಗಿ ಕಾಲುಜಾರಿ ಮರದಿಂದ ಕೆಳಗೆ ಬಿದ್ದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಆದರೆ  ಚಿಕಿತ್ಸೆ ಫಲಿಸದೇ ಸಾವನ್ನ್ಪಪಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!