Saturday, October 17, 2026
Homeಇತರಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ನೀಡಲು ಹೋಗಿ ಹೆಣವಾದ ಯುವಕ

ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ನೀಡಲು ಹೋಗಿ ಹೆಣವಾದ ಯುವಕ

- Advertisement -
- Advertisement -

ವಿಜಯಪುರ : ವಿಜಯಪುರ ಜಿಲ್ಲೆಯ ಹೂವಿನಹಿಪ್ಪರಗಿ ಗ್ರಾಮದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ, ನಕಲು ಚೀಟಿಕೊಡಲು ಹೋಗಿದ್ದ ಕಾನಾಳ ಗ್ರಾಮದ 19 ವರ್ಷದ ಸಾಗರ್ ಚಲವಾದಿ ಎಂಬ ಯುವಕ ಸಾವಿಗೀಡಾಗಿದ್ದಾನೆ.

ವಿದ್ಯಾರ್ಥಿಗಳಿಗೆ ನಕಲು ಚೀಟಿ ಕೊಡಲು ಹೋಗಿದ್ದಾಗ ಪೊಲೀಸರ ಲಾಟಿ ಏಟಿಗೆ ತಮ್ಮ ಮಗ ಮೃತಪಟ್ಟಿದ್ದಾಗಿ ಮೃತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದ್ರೆ, ಪೊಲೀಸರು ಮಾತ್ರ ಹೃದಯ ಸಂಬಂಧಿ ಕಾಯಿಲೆ ಇದ್ದ ಯುವಕ, ತಮ್ಮನ್ನು ನೋಡಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಹೇಳುತ್ತಿದ್ದಾರೆ. ಹೀಗಾಗಿ ಯುವಕನ ಸಾವು ಅನುಮಾನ ಮೂಡಿಸಿದ್ದು, ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!