Wednesday, June 24, 2026
Homeಕರಾವಳಿಮಂಗಳೂರು; ಜ್ವರಕ್ಕೆ 10 ತರಗತಿ ಬಾಲಕ ಬಲಿ

ಮಂಗಳೂರು; ಜ್ವರಕ್ಕೆ 10 ತರಗತಿ ಬಾಲಕ ಬಲಿ

- Advertisement -
- Advertisement -

ಮಂಗಳೂರು: ಜ್ವರಕ್ಕೆ 10 ತರಗತಿ ಬಾಲಕ ಬಲಿಯಾಗಿರುವ ಘಟನೆ ಕಿನ್ನಿಗೋಳಿಯ ಪಕ್ಷಿಕೆರೆಯಲ್ಲಿ ನಡೆದಿದೆ.ಪಕ್ಷಿಕೆರೆ ಜುಮಾ‌ ಮಸೀದಿ ಬಳಿಯ ನಿವಾಸಿ ಇಸ್ಮಾಯೀಲ್ ಅವರ ಪುತ್ರ ಹಿಲಾಲ್(16 )ಮೃತ ಬಾಲಕ.

ಹಿಲಾಲ್ ಗೆ ಕೆಲದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು.ಹಾಗಾಗಿ ಆತನನ್ನು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹಿಲಾಲ್ ಇಂದು ಮೃತಪಟ್ಟಿದ್ದಾನೆ.

ಹಿಲಾಲ್ ಸುರತ್ಕಲ್ ನ ಗೈಡ್ ಲೈನ್ ಟುಟೋರಿಯಲ್ಸ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಪಕ್ಷಿಕೆರೆ ಅಲ್ ಬದ್ರಿಯಾ ಮದರಸದ ವಿದ್ಯಾರ್ಥಿ. ಮೃತ ಹಿಲಾಲ್ ತಂದೆ ಇಸ್ಮಾಯೀಲ್, ತಾಯಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ

- Advertisement -

Latest News

error: Content is protected !!