Monday, April 29, 2024
Homeಕರಾವಳಿಮಂಗಳೂರು : ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಶಾಲಾಡಳಿತ ಮಂಡಳಿ, ಪ್ರಾಂಶುಪಾಲ, ವಾರ್ಡನ್‌ ವಿರುದ್ಧ...

ಮಂಗಳೂರು : ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಶಾಲಾಡಳಿತ ಮಂಡಳಿ, ಪ್ರಾಂಶುಪಾಲ, ವಾರ್ಡನ್‌ ವಿರುದ್ಧ ದೂರು ದಾಖಲು

spot_img
- Advertisement -
- Advertisement -

ಮಂಗಳೂರು : ಉಳ್ಳಾಲದ  ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ   ವಿದ್ಯಾಸಂಸ್ಥೆ  , ಪ್ರಾಂಶುಪಾಲರು ಹಾಗೂ ಹಾಸ್ಟೆಲ್‌ ವಾರ್ಡನ್‌ ವಿರುದ್ಧ ದೂರು ದಾಖಲಾಗಿದೆ. ತಾಯಿ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಲು ವಿದ್ಯಾರ್ಥಿಗೆ ಮೊಬೈಲ್‌ ನೀಡದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಿವಾಸಿ ರಮೇಶ್‌ ಹಾಗೂ ಮಂಜುಳಾ ದಂಪತಿ ಪುತ್ರ ಪೂರ್ವಜ್‌ (14) ಆತ್ಮಹತ್ಯೆಗೈದ ವಿದ್ಯಾರ್ಥಿ. ಜೂ.11 ರಂದು  ರಾತ್ರಿ 12 ರ ನಂತರ ಹಾಸ್ಟೆಲ್‌ ರೂಮಿನ ರ್ಯಾಕ್‌ ನ ರಾಡಿಗೆ ನೈಲಾನ್‌ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನು ಗಮನಿಸಿದ ವಿದ್ಯಾರ್ಥಿಯೋರ್ವ ಹಾಸ್ಟೆಲ್‌ ಅಧಿಕೃತರಿಗೆ ಮಾಹಿತಿ ನೀಡಿದ್ದಾನೆ.  

ಬಳಿಕ  ಮೃತ ವಿದ್ಯಾರ್ಥಿ ಪೂರ್ವಜ್‌ ತಾಯಿ ಸಹೋದರ ಅರುಣ್‌ ಎಂಬವರಿಗೆ ಪೊಲೀಸರು ಪ್ರಕರಣ ನಡೆದಿರುವುದನ್ನು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ನೇಹಿತ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿ ಮನೋಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿ ಹಾಸ್ಟೆಲ್ ಗೆ ಕಳುಹಿಸಿದ್ದರು. ನಂತರ ಸಂಜೆ ಬೆಂಗಳೂರಿನಿಂದ ಸಂಜೆ ವೇಳೆ ಆಗಮಿಸಿದ ಹೆತ್ತವರು  ಶಾಲಾ ಆಡಳಿತ ಮಂಡಳಿಯ ಕಿರುಕುಳದಿಂದಲೇ ಪೂರ್ವಜ್‌ ಆತ್ಮಹತ್ಯೆಗೆ ಶರಣಾದಿದ್ದಾನೆ. ಹಣದಾಸೆಗೆ ಶಿಕ್ಷಣ ಸಂಸ್ಥೆಯವರು ನಡೆಸುತ್ತಿದ್ದಾರೆ.

 ಶಾಲೆಗೆ ಸೇರಿಸುವ ವೇಳೆ ವಿದ್ಯಾರ್ಥಿ ಚಲನವಲನವನ್ನು ಪೋಷಕರಿಗೆ ತಿಳಿಸುತ್ತೇನೆ ಅಂದಿದ್ದರೂ  ಈವರೆಗೆ ಪೂರ್ವಜ್‌ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ.  ಹೆತ್ತವರು  ಕರೆ ಮಾಡಿದರೂ ಸಂಭಾಷಣೆಗೆ ಶಾಲಾಡಳಿತ ಮಂಡಳಿ ಅವಕಾಶ ನೀಡುತ್ತಿರಲಿಲ್ಲ. ಜು.11 ರಂದು ತಾಯಿ ಮಂಜುಳಾ ಅವರ ಹುಟ್ಟುಹಬ್ಬವಿದ್ದು, ಅದಕ್ಕಾಗಿ ಶೂಭಾಶಯ ಕೋರಲು ಮೊಬೈಲ್‌ ನೀಡದೇ ಇರುವುದರಿಂದ ನೊಂದು ಬಾಲಕ ಪೂರ್ವಜ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ತಾಯಿ ಮಂಜುಳಾ ದೂರು ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!