Monday, May 6, 2024
Homeಕ್ರೀಡೆಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯಕ್ಕೆ ತಂಡ ಪ್ರಕಟ: 11ರ ಬಳಗದಲ್ಲಿ ಕೆಎಲ್ ರಾಹುಲ್‌ಗೆ...

ಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯಕ್ಕೆ ತಂಡ ಪ್ರಕಟ: 11ರ ಬಳಗದಲ್ಲಿ ಕೆಎಲ್ ರಾಹುಲ್‌ಗೆ ಸ್ಥಾನವಿಲ್ಲ

spot_img
- Advertisement -
- Advertisement -

ಮೆಲ್ಬೋರ್ನ್‌: ಅಡಿಲೇಡ್‌ನ ಹೀನಾಯ ಸೋಲಿನ ನಂತರ ರಹಾನೆ ನೇತೃತ್ವದ ಭಾರತೀಯ ತಂಡ ಮೆಲ್ಬೋರ್ನ್‌ನಲ್ಲಿ ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್‌ನತ್ತ ಗಮನ ಹರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಮೊಹಮ್ಮದ್ ಶಮಿ ಸರಣಿಯಿಂದ ಹೊರಗುಳಿದಿದ್ದು, ತಂಡವನ್ನು ಗೆಲುವಿನ ಟ್ರ್ಯಾಕ್​ಗೆ ಮರಳಿಸಲು ಟೀಂ ಇಂಡಿಯಾ ನಾಲ್ಕು ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ.

ಮುಂಬೈ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಆಡುವ ಬಳಗವನ್ನು ಸೇರಿದರೆ, ಕನ್ನಡಿಗ ಕೆಎಲ್ ರಾಹುಲ್‌ರನ್ನು ಹೊರಗಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಬದಲಿಗೆ ಕೆ.ಎಲ್. ರಾಹುಲ್ ಅವರಿಗೆ ಅವಕಾಶ ಸಿಗುತ್ತದೆ ಎಂಬ ಭರವಸೆ ಇತ್ತು. ಆದರೆ ಆ ಭರವಸೆ ಹುಸಿಯಾಗಿದೆ. ಇದಕ್ಕೆ ಕಾರಣವೆಂದರೆ ಆಡಳಿತ ಮಂಡಳಿ ಹನುಮಾ ವಿಹಾರಿಯನ್ನು 2ನೇ ಟೆಸ್ಟ್​ನಲ್ಲಿ ಆಡಿಸಲು ತೀರ್ಮಾನಿಸಿದ್ದು, ಮೆಲ್ಬೋರ್ನ್ ಟೆಸ್ಟ್ನಲ್ಲಿ ಹನುಮಾ ವಿಹಾರಿ 4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ವರದಿಯಾಗಿದೆ.

ಕಳಪೆ ಫಾರ್ಮ್‌ನಲ್ಲಿರುವ ಪೃಥ್ವಿ ಶಾ ಸ್ಥಾನವನ್ನು ತುಂಬಲಿರುವ 21ರ ಹರೆಯದ ಗಿಲ್ ಚೊಚ್ಚಲ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಶಾ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 0 ಹಾಗೂ 4 ರನ್ ಗಳಿಸಿದ್ದಾರೆ. ಗಿಲ್ 2018ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಪೃಥ್ವಿ ಶಾ ನಾಯಕತ್ವದಡಿ ಆಡಿದ್ದು ಭಾರತವು ಆಗ ವಿಶ್ವಕಪನ್ನು ಗೆದ್ದುಕೊಂಡಿತ್ತು.

ಗಾಯಾಳು ಮೊಹಮ್ಮದ್ ಶಮಿ ಬದಲಿ ಸ್ಥಾನದಲ್ಲಿ ಮಹಮ್ಮದ್ ಸಿರಾಜ್, ಡೆಬ್ಯು ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಆಲ್​ರೌಂಡರ್ ಜಡೇಜಾ ಕೂಡ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಸ್ಥಾನ ಪಡೆದಿದ್ದು, ವಿರಾಟ್​ ಕೊಹ್ಲಿ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯ ಸೋತಿರುವ ಭಾರತ ತಂಡದಲ್ಲಿ ಬಾರಿ ಬದಲಾವಣೆ ಮಾಡಿದ್ದು, ಆತಿಥೇಯ ಆಸ್ಟ್ರೇಲಿಯಾಗೆ ತಿರುಗೇಟು ನೀಡುವ ಲೆಕ್ಕಚಾರದಲ್ಲಿದೆ.

ಎರಡನೇ ಟೆಸ್ಟ್ ಪಂದ್ಯದ ಆಡುವ ಬಳಗ ಹೀಗಿದೆ:
ಅಜಿಂಕ್ಯ ರಹಾನೆ(ನಾಯಕ), ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್ ಅಶ್ವಿನ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

- Advertisement -
spot_img

Latest News

error: Content is protected !!