Monday, May 6, 2024
Homeತಾಜಾ ಸುದ್ದಿಗಗನಕ್ಕೇರಿದ ಟೊಮ್ಯಾಟೋ ದರ; ಅಂಗಡಿಯಲ್ಲಿ ಟೊಮ್ಯಾಟೋ ಕಾಯಲು ಬೌನ್ಸರ್ ಗಳನ್ನು ನೇಮಿಸಿದ ವ್ಯಾಪಾರಿ

ಗಗನಕ್ಕೇರಿದ ಟೊಮ್ಯಾಟೋ ದರ; ಅಂಗಡಿಯಲ್ಲಿ ಟೊಮ್ಯಾಟೋ ಕಾಯಲು ಬೌನ್ಸರ್ ಗಳನ್ನು ನೇಮಿಸಿದ ವ್ಯಾಪಾರಿ

spot_img
- Advertisement -
- Advertisement -

ಉತ್ತರ ಪ್ರದೇಶ; ದೇಶದಾದ್ಯಂತ ಟೊಮ್ಯಾಟೋ ದರ ಗಗನಕ್ಕೇರಿದೆ. ಅನೇಕ ಕಡೆಗಳಲ್ಲಿ ಟೊಮ್ಯಾಟೋ ಕಳ್ಳತನ ಪ್ರಕರಣಗಳು ಕೂಡ ವರದಿಯಾಗುತ್ತಿವೆ. ಹೀಗಿರುವಾಗಲೇ ತರಕಾರಿ ವ್ಯಾಪಾರಿಯೊಬ್ಬರು ಟೊಮ್ಯಾಟೋ ಕಾಯಲು ಇಬ್ಬರು ಬೌನ್ಸರ್ ಗಳನ್ನು ನೇಮಿಸಿ ಸುದ್ದಿಯಾಗಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಉತ್ತರ ಪ್ರದೇಶದ ವಾರಣಸಿಯ ತರಕಾರಿ ವ್ಯಾಪಾರಿ ಅಜಯ್ ಫೌಜಿ ಟೊಮ್ಯಾಟೊ ಕಾಯಲು ಇಬ್ಬರು ಬೌನ್ಸರ್ ನೇಮಿಸಿದ್ದಾರೆ.

ಟೊಮ್ಯಾಟೊ ಬೆಲೆ ಗಗನಕ್ಕೇರಿದೆ.ಹಲವೆಡೆ ಟೊಮ್ಯಾಟೊ ಕಳ್ಳತನ ನಡೆದಿವೆ.ಹೀಗಾಗಿ ಈ ಸಮಸ್ಯೆ ಇಲ್ಲಿ ಆಗಬಾರದು ಎಂದು ಇಬ್ಬರು ಬೌನ್ಸರ್ ನೇಮಕ ಮಾಡಿದ್ದೇನೆ ಎಂದು ಅಜಯ್ ಫೌಜಿ ಹೇಳಿದ್ದಾರೆ.

ಟೊಮ್ಯಾಟೊ ಪಕ್ಕದಲ್ಲೇ ನಿಂತುಕೊಂಡಿರುವ ಇಬ್ಬರು ಬೌನ್ಸರ್ ಗ್ರಾಹಕರನ್ನು ಎಚ್ಚರಿಸುತ್ತಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.

- Advertisement -
spot_img

Latest News

error: Content is protected !!