Monday, June 8, 2026
Homeತಾಜಾ ಸುದ್ದಿನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಶಾಸಕ ಪತ್ತೆ.. ಕೊಲೆ ಶಂಕೆ

ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಶಾಸಕ ಪತ್ತೆ.. ಕೊಲೆ ಶಂಕೆ

- Advertisement -
- Advertisement -

ಕಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಹೆಮತಾಬಾದ್‌ನ ಬಿಜೆಪಿ ಶಾಸಕ ದೇವೆಂದ್ರನಾಥ್ ರೇ ಇಂದು ಮುಂಜಾನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮ್ಮ ಮನೆಯಿಂದ 1 ಕಿ.ಮೀ ದೂರದಲ್ಲಿರುವ ಮಾರ್ಕೆಟ್ ನಲ್ಲಿ ಶಾಸಕನ ಮೃತದೇಹ ಪತ್ತೆಯಾಗಿದೆ.

ಮೃತ ದೇವೆಂದ್ರನಾಥ್ ರೇ

ಇದು ಕೊಲೆ
ಅದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸುತ್ತಿದೆ. ದೇವೇಂದ್ರನಾಥ್ ರೇ ಅವರು 2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಅದಕ್ಕೂ ಮೊದಲು ಅವರು ಸಿಪಿಐ (ಎಂ) ಶಾಸಕರಾಗಿದ್ದರು. ಸಿಪಿಐ(ಎಂ)ನಿಂದ ಹೇಮತಾಬಾದ್ ವಿಧಾನಸಭಾ ವಿಭಾಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಕಾಯ್ದಿರಿಸಿದ ಸ್ಥಾನದಲ್ಲಿ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದರು. ಆದರೆ ಲೋಕಸಭಾ ಚುನಾವಣೆಯ ನಂತರ ಕಳೆದ ವರ್ಷ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಕಾರಣವೂ ಇರಲಿಲ್ಲ. ಇದೊಂದು ಕೊಲೆ ಎಂದು ಅವರು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

Latest News

error: Content is protected !!