Friday, May 17, 2024
Homeಕರಾವಳಿಕಾಸರಗೋಡುಮೀನುಗಾರಿಕಾ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ

ಮೀನುಗಾರಿಕಾ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆ

spot_img
- Advertisement -
- Advertisement -

ಕಾಸರಗೋಡು: ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದು ಮೂವರು ಮೀನುಗಾರರು ನಾಪತ್ತೆಯಾದ ಘಟನೆ ಕಾಸರಗೋಡು ಸಮುದ್ರದಲ್ಲಿ ಇಂದು ಬೆಳಗ್ಗೆ  ನಡೆದಿದೆ. ಘಟನೆಯಲ್ಲಿ ನಾಲ್ವರು ಪಾರಾಗಿದ್ದಾರೆ.

ಕಸಬಾ ಕಡಪ್ಪುರದ ಸಂದೀಪ್(33), ರತೀಶ್(30) ಮತ್ತು ಕಾರ್ತಿಕ್ (29) ನಾಪತ್ತೆಯಾದವರು.
ರವಿ(40) , ಶಿಬಿನ್(30) ಹಾಗೂ ಮಣಿಕುಟ್ಟನ್(35) ಎಂಬವರು ಈಜಿ ದಡ ಸೇರಿದ್ದಾರೆ. ಅಸ್ವಸ್ಥಗೊಂಡಿರುವ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮುದ್ರದ ದೈತ್ಯ ಅಲೆಗಳ ರಭಸಕ್ಕೆ ಫೈಬರ್ ದೋಣಿ ಮಗುಚಿ ಬಿದ್ದು ಈ ಅನಾಹುತ ಸಂಭವಿಸಿದೆ. ಸಮುದ್ರಕ್ಕೆ ಬಿದ್ದು ನಾಪತ್ತೆಯಾದವರಿಗಾಗಿ ಕರಾವಳಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಮೀನುಗಾರರು ಶೋಧ ನಡೆಸುತ್ತಿದ್ದಾರೆ.ಮಗುಚಿಬಿದ್ದ ದೋಣಿ ಭಾಗಶಃ ಹಾನಿಗೊಂಡಿದೆ.

- Advertisement -
spot_img

Latest News

error: Content is protected !!