Friday, June 5, 2026
Homeಕರಾವಳಿಉಡುಪಿಕರಾವಳಿಗೆ ಕರಾಳ ಶುಕ್ರವಾರ: ದ.ಕ ಜಿಲ್ಲೆಯ 16 , ಉಡುಪಿಯ 5 ಮಂದಿಗೆ ಇಂದು ಕೊರೋನಾ...

ಕರಾವಳಿಗೆ ಕರಾಳ ಶುಕ್ರವಾರ: ದ.ಕ ಜಿಲ್ಲೆಯ 16 , ಉಡುಪಿಯ 5 ಮಂದಿಗೆ ಇಂದು ಕೊರೋನಾ ಪಾಸಿಟಿವ್

- Advertisement -
- Advertisement -

ಮಂಗಳೂರು: ಕೊರೋನಾ ಮಹಾಮಾರಿ ಕರಾವಳಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸುತ್ತಲೇ ಇದೆ. ಶುಕ್ರವಾರ ಕರಾವಳಿಯ ಪಾಲಿಗೆ ಕಹಿಯಾಗಿ ಪರಿಣಮಿಸಿದ್ದು, ದ.ಕ ಜಿಲ್ಲೆಯ 16 ಮಂದಿಗೆ ಮತ್ತು ಉಡುಪಿಯ 5 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಇಂದು ಪತ್ತೆಯಾಗಿರುವ ಸೋಂಕಿತರೆಲ್ಲಾ ಕಳೆದ ಮಂಗಳವಾರ ದುಬೈಯಿಂದ ವಿಮಾನ ಮೂಲಕ ಬಂದವರಾಗಿದ್ದಾರೆ.

ದುಬೈಯಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 49 ಜನರ ಪೈಕಿ 5 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಕೊರೊನಾದಿಂದಾಗಿ ದುಬೈಯಲ್ಲಿ ಸಂಕಷ್ಟಕ್ಕೀಡಾದ ಕರಾವಳಿಗರನ್ನು ಹೊತ್ತು ಹೊರಟ ಮೊದಲ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಮೇ.12) ರಾತ್ರಿ ಬಂದಿಳಿದಿತ್ತು. 38 ಗರ್ಭಿಣಿಯರು ಸಹಿತ 177 ಮಂದಿ ಕರಾವಳಿಗರು ಮಂಗಳೂರು ತಲುಪಿದ್ದರು.

ಕರ್ನಾಟಕದಲ್ಲಿ ಇಂದು45 ಸೋಂಕಿತರು ಪತ್ತೆ ಒಟ್ಟು ಸೋಂಕಿತರ ಸಂಖ್ಯೆ1032ಕ್ಕೆ ಏರಿಕೆ
ದಕ್ಷಿಣಕನ್ನಡ 16
ಬೆಂಗಳೂರು 13
ಉಡುಪಿ05
ಹಾಸನ 03
ಬೀದರ್03
ಚಿತ್ರದುರ್ಗ02
ಶಿವಮೊಗ್ಗ01
ಕೋಲಾರ01
ಬಾಗಲಕೋಟೆ01

ರಾಷ್ಟ್ರದ ಅಂಕಿ ಅಂಶ
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,967 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಅಲ್ಲದೆ, ಮಾರಕ ವೈರಸ್‌ಗೆ ದೇಶದಾದ್ಯಂತ 100 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

- Advertisement -

Latest News

error: Content is protected !!