Thursday, June 4, 2026
Homeತಾಜಾ ಸುದ್ದಿಮದುವೆ ದಿಬ್ಬಣದ ಟ್ರ್ಯಾಕ್ಟರ್ ಚಲಾಯಿಸಿದ ಬಿಜೆಪಿ ಶಾಸಕ

ಮದುವೆ ದಿಬ್ಬಣದ ಟ್ರ್ಯಾಕ್ಟರ್ ಚಲಾಯಿಸಿದ ಬಿಜೆಪಿ ಶಾಸಕ

- Advertisement -
- Advertisement -

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮದುವೆ ದಿಬ್ಬಣದ‌ ಟ್ರ್ಯಾಕ್ಟರ್ ಚಲಾಯಿಸಿದ್ದಾರೆ.‌

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ.

ಬೆಳಗುತ್ತಿ ಗ್ರಾಮದ ಮಲ್ಲಿಕಾರ್ಜುನ ಅಪ್ಪನವರ ಪುತ್ರ ಪ್ರಶಾಂತ್ ಹಾಗೂ ಪ್ರಿಯಾ ಅವರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ರೇಣುಕಾಚಾರ್ಯ, ಖುದ್ದು ಮದುವೆ ದಿಬ್ಬಣ ಹೊತ್ತ ಟ್ಯಾಕ್ಟರ್ ಚಲಾಯಿಸಿದ್ದಾರೆ.

ವಧು ಮತ್ತು ವರ ಇದ್ದ ದಿಬ್ಬಣದ
ಟ್ಯಾಕ್ಟರ್ ಚಲಾಯಿಸಿ ನವ ಜೋಡಿಗೆ ರೇಣುಕಾಚಾರ್ಯ ಆಶೀರ್ವದಿಸಿದ್ದಾರೆ.

ಮೊನ್ನೆಯಷ್ಟೇ ತಮ್ಮ ಕ್ಷೇತ್ರದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕ ರೇಣುಕಾಚಾರ್ಯ ತಾಳಿ ಸರಕ್ಕೆ ಕರಿಮಣಿ ಪೋಣಿಸಿ ಗಮನ ಸೆಳೆದಿದ್ದರು.

- Advertisement -

Latest News

error: Content is protected !!