ಬಂಟ್ವಾಳ: ಬಿ ಸಿ ರೋಡಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನ್ಯಾಯವಾದಿ ಪ್ರಸಾದಕುಮಾರ್ ರೈ ಅವರು ಹಿಂದೂ ಕಾರ್ಯಕರ್ತ ಭರತ್ ಕುಂಡ್ಡೆಲ್ ರವರ ಪ್ರಕರಣದಲ್ಲಿ ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದು, ಆದರೆ ನ್ಯಾಯಾಲಯದ ಪ್ರಕ್ರಿಯೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಅಡಿಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಸಾದ್ ಕುಮಾರ್ ರೈ ಯವರ ವಿರುದ್ಧ ದೂರು ದಾಖಲಾಗಿದ್ದು, ಬಿಜೆಪಿ ಕಾನೂನು ಪ್ರಕೋಷ್ಠ- ಬಂಟ್ವಾಳ ಮಂಡಲ ತೀವ್ರವಾಗಿ ಖಂಡಿಸುತ್ತದೆ.
ಇದು ಹಿಂದೂ ಕಾರ್ಯಕರ್ತರ ಪರವಾಗಿ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡುವ ವಕೀಲರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರವಾಗಿದೆ.
ವಕೀಲರಾದ ಪ್ರಸಾದ್ ಕುಮಾರ್ ರೈ ಯವರು ಪ್ರಕರಣದ ಸತ್ಯಾ ಸತ್ಯತೆಯ ಬಗ್ಗೆ ಪ್ರತಿಭಟನಾ ಸಭೆಯಲ್ಲಿ ವಿವರವನ್ನು ನೀಡಿದ್ದು, ಆದರೆ ಸದ್ರಿ ಪ್ರಕರಣದ ಪ್ರಕ್ರಿಯೆಯ ಬಗ್ಗೆ ತಪ್ಪು ಮಾಹಿತಿ ನೀಡಿ ನ್ಯಾಯಾಂಗ ನಿಂದನೆಯ ಬಣ್ಣ ಬಳಿದು, ಹಿಂದುತ್ವಕ್ಕಾಗಿ ಹೋರಾಡುವ ಕಾರ್ಯಕರ್ತರ ಪ್ರಕರಣಗಳಲ್ಲಿ ನ್ಯಾಯಾಲಯಲ್ಲಿ ವಾದ ಮಂಡಿಸುವ ವಕೀಲರನ್ನು ಬೆದರಿಸುವ ತಂತ್ರವು ಖಂಡನೀಯ. ಇಂತಹ ಕುತಂತ್ರಗಳಿಗೆ, ಬೆದರಿಕೆಗಳಿಗೆ, ಹೆದರಿ, ಹಿಂದೂ ಕಾರ್ಯಕರ್ತರು, ಮುಖಂಡರು, ವಕೀಲರು ಬೆನ್ನು ತೋರಿಸಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರ ಪರವಾಗಿ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟ ನಡೆಸಲು ಶಕ್ತ ವಕೀಲರು ಸದಾ ಸಿದ್ದರಾಗಿದ್ದೇವೆ. ರಾಜ್ಯ ಕಾಂಗ್ರೆಸ್ ಸರಕಾರ ದಿವಾಳಿಯಾಗಿದ್ದು, ಜನರ ಗಮನ ಬೇರೆಡೆಗೆ ಸೆಳೆಯಲು ಹಿಂದೂ ಕಾರ್ಯಕರ್ತರನ್ನು, ಮುಖಂಡರನ್ನು ಹಿಂದೂ ವಕೀಲರನ್ನು ಗುರಿಯಾಗಿಸಿಕೊಳ್ಳುತ್ತಿದ್ದು, ಪೊಲೀಸ್ ಅಧಿಕಾರಿಗಳು ಸರಕಾರದ ಕೈಗೊಂಬೆಯಾಗದೆ, ಸ್ವಂತ ವಿವೇಚನೆಯಿಂದ ಕೆಲಸ ಮಾಡಬೇಕು. ವಕೀಲರಾದ ಪ್ರಸಾದ್ ಕುಮಾರ್ ರೈ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಸುಳ್ಳು ಆರೋಪ ಹೊರಿಸಿ ನೀಡಿರುವ ದೂರವನ್ನು ತಕ್ಷಣ ರದ್ದುಗೊಳಿಸಿ, ದೂರುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಬಿಜೆಪಿ ಕಾನೂನು ಪ್ರಕೋಷ್ಠ- ಬಂಟ್ವಾಳ ಮಂಡಲದ ಸಂಚಾಲಕರಾದ ವೀರೇಂದ್ರ ಎಂ ಸಿದ್ದಕಟ್ಟೆಯವರು ಆಗ್ರಹಿಸಿದ್ದಾರೆ.


