ಬಂಟ್ವಾಳ: ಬಿರ್ವೆರ್ ಕುಡ್ಲ ಇದರ ಬಂಟ್ವಾಳ ತಾಲೂಕು ಸಮಿತಿಯ ವತಿಯಿಂದ ಪಡಿತರ ಕಿಟ್ ವಿತರಣೆ ತುಂಬೆಯಲ್ಲಿ ನಡೆಯಿತು. ಅಕ್ಕಿ, ಸಕ್ಕರೆ, ಚಾ ಹುಡಿ, ಉಪ್ಪು, ಬಿಸ್ಕೆಟ್ ಮೊದಲಾದ ಅವಶ್ಯಕ ದಿನ ಬಳಕೆ ವಸ್ತುಗಳಿದ್ದ ಕಿಟ್ ಅನ್ನು ತುಂಬೆಯ ಬೊಳ್ಳಾರಿ, ಪೇರ್ಲಬೈಲು, ಮುದಲ್ಮೆ, ಕುಚ್ಚುಗುಡ್ಡೆ ಪರಿಸರದ ನೂರು ಕುಟುಂಬಗಳಿಗೆ ಮನೆ ಮನೆಗೆ ತೆರಳಿ ವಿತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ, ತಾ.ಪಂ.ಸದಸ್ಯ ಗಣೇಶ್ ಸುವರ್ಣ ತುಂಬೆ, ಬಂಟ್ವಾಳ ಗ್ಯಾರೇಜು ಮಾಲಕರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಬಿ., ಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ, ಉದಯ್ ತುಂಬೆ, ಬಿರ್ವೆರ್ ಕುಡ್ಲ ಇದರ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಕಿರಣ್ ಪೂಂಜರ ಕೋಡಿ, ತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಜಿ ಪೂಜಾರಿ, ಸದ್ಯರಾದ ಅರುಣ್ ಕುಮಾರ್ ಬೊಳ್ಳಾರಿ, ಸಂಜೀವ ರಾಮಲ್‌ಕಟ್ಟೆ, ಪ್ರಮುಖರಾದ ಸೋಮಪ್ಪ ಕೋಟ್ಯಾನ್, ರಾಜೇಶ್ ಸುವರ್ಣ, ಧನಂಜಯ ರಾಮಲ್‌ಕಟ್ಟೆ, ರಾಜು ಗಾಣದಲಚ್ಚಿಲ್, ಜಗನ್ನಾಥ ಸಾಲ್ಯಾನ್ ಹಾಗೂ ಬಿರ್ವೆರ್ ಕುಡ್ಲ ಬಂಟ್ವಾಳ ತಾಲೂಕು ಸಮಿತಿ ಸದಸ್ಯರು ಹಾಜರಿದ್ದರು.
ತುಂಬೆ: ಬಿರ್ವೆರ್ ಕುಡ್ಲ ತಾಲೂಕು ಸಮಿತಿಯ ವತಿಯಿಂದ ಪಡಿತರ ಕಿಟ್ ವಿತರಣೆ
- Advertisement -
- Advertisement -
- Advertisement -