- Advertisement -
- Advertisement -
ಹೈದರಾಬಾದ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ತೆಲುಗು ನಟಿ ವಿ. ಶಾಂತಿ ಮೃತದೇಹ ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ಲಾಕ್ ಡೌನ್ ಜಾರಿಯಲ್ಲಿದ್ದು, ಕೆಲವು ದಿನಗಳಿಂದ ವಿ. ಶಾಂತಿ ಅಪಾರ್ಟ್ಮೆಂಟ್ ನಿಂದ ಹೊರ ಬಂದಿರಲಿಲ್ಲ. ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಾಗಿಲು ಮುರಿದು ಪರಿಶೀಲನೆ ನಡೆಸಿದಾಗ ಮಂಚದ ಮೇಲೆ ಮೃತದೇಹ ಕಂಡು ಬಂದಿದೆ.
ಲಾಕ್ಡೌನ್ ಸಂದರ್ಭದಲ್ಲಿ ಆಕೆಯ ಮೃತದೇಹ ಕಂಡು ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಮದ್ಯ ಸೇವನೆ ಮಾಡಿರಬಹುದೆಂದು ಹೇಳಲಾಗಿದೆ. ನಿರೂಪಕಿಯಾಗಿದ್ದ ವಿ.ಶಾಂತಿ ಕಿರುತೆರೆ ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
- Advertisement -