Friday, June 5, 2026
Homeಕರಾವಳಿಮಂಗಳೂರುಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಗುಂಡಿಗೆ ಬೈಕ್ ಸಮೇತ ಬಿದ್ದು ಗಾಯಗೊಂಡ ಯುವಕ

ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಗುಂಡಿಗೆ ಬೈಕ್ ಸಮೇತ ಬಿದ್ದು ಗಾಯಗೊಂಡ ಯುವಕ

- Advertisement -
- Advertisement -

ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಅಗೆಯಲ್ಪಟ್ಟಿದ್ದ ಗುಂಡಿಗೆ ಬೈಕ್ ಸವಾರನೋರ್ವ ಬಿದ್ದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.

ಕೆ.ಎಸ್. ರಾವ್ ರಸ್ತೆಯಲ್ಲಿ ಭೂಗತ ಕೇಬಲ್ ಹಾಗೂ ಪೈಪ್ ಲೈನ್ ಅಳವಡಿಸಲು ತೆಗೆಯಲ್ಪಟ್ಟಿದ್ದ ಹೊಂಡಕ್ಕೆ ಯುವಕ ಬೈಕ್ ಸಮೇತ ಬಿದ್ದು ಗಾಯಗೊಂಡಿದ್ದಾನೆ.

ಕಾಮಗಾರಿಗಾಗಿ ಗುಂಡಿ ತೆಗೆದು ತೆಗೆದು ಮುಚ್ಚದೇ ಬಿಟ್ಟಿದ್ದ ಹಿನ್ನೆಲೆಯಲ್ಲಿ ಗುಂಡಿಯಲ್ಲಿ ನೀರು ತುಂಬಿದ್ದ ಕಾರಣ ಮೇಲಕ್ಕೆ ಬರಲಾಗದೇ ಯುವಕ ಕಷ್ಟ ಪಡಬೇಕಾಯಿತು. ಬಳಿಕ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಗಾಯಗೊಂಡ ಯುವಕ ಮತ್ತು ಬೈಕ್ ಅನ್ನು ಮೇಲಕ್ಕೆತ್ತಿದ್ದಾರೆ. ಜನನಿಬಿಡವಾದ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡಂತೆ ದೊಡ್ಡ ಗುಂಡಿಯನ್ನು ತೆಗೆಯಲಾಗಿದ್ದು, ತಡೆ ಗೋಡೆ ಕೂಡಾ ನಿರ್ಮಾಣ ಮಾಡದ ಕಾರಣ ಯುವಕ ಬೈಕ್ ಸಮೇತ ಗುಂಡಿಗೆ ಬಿದ್ದಿದ್ದಾನೆ.

- Advertisement -

Latest News

error: Content is protected !!