Thursday, June 4, 2026
Homeಕರಾವಳಿಕಡಬದಲ್ಲಿ ಚಲಿಸುತ್ತಿದ್ದ ಡಿಯೋ ಬೈಕ್ ನ ಟಯರ್ ಸ್ಫೋಟ

ಕಡಬದಲ್ಲಿ ಚಲಿಸುತ್ತಿದ್ದ ಡಿಯೋ ಬೈಕ್ ನ ಟಯರ್ ಸ್ಫೋಟ

- Advertisement -
- Advertisement -

ಕಡಬ:  ಚಲಿಸುತ್ತಿದ್ದ ಹೋಂಡಾ ಡಿಯೋ ವಾಹನದ ಹಿಂಬದಿ ಚಕ್ರ ಸ್ಫೋಟಗೊಂಡ ಪರಿಣಾಮ ಡಿಯೋ ರಸ್ತೆಗೆಸೆಯಲ್ಪಟ್ಟು ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಗಾಯಾಳುವನ್ನು ಕಡಬ ತಾಲೂಕಿನ ಕಳಾರ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ಅಶ್ರಫ್ ಹೋಂಡಾ ಡಿಯೋ ವಾಹನದಲ್ಲಿ ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ವೇಳೆ ವಾಹನದ ಹಿಂಬದಿ ಚಕ್ರ ಸ್ಫೋಟಗೊಂಡಿದೆ. ಘಟನೆಯಲ್ಲಿ ಡಿಯೋ ವಾಹನದ ಒಂದು ಭಾಗಕ್ಕೆ ಹಾನಿಯಾಗಿದೆ.

- Advertisement -

Latest News

error: Content is protected !!