Saturday, October 17, 2026
Homeಕರಾವಳಿಸುಳ್ಯ: ಹೆದ್ದಾರಿ ತಿರುವಿನಲ್ಲಿ ಬೈಕ್ ಸವಾರರಿಗೆ ದಿಢೀರ್ ಎದುರಾದ ಕಾಡಾನೆ!

ಸುಳ್ಯ: ಹೆದ್ದಾರಿ ತಿರುವಿನಲ್ಲಿ ಬೈಕ್ ಸವಾರರಿಗೆ ದಿಢೀರ್ ಎದುರಾದ ಕಾಡಾನೆ!

- Advertisement -
- Advertisement -

ಸುಳ್ಯ: ಕಾಡಾನೆಯಿಂದ ಬೈಕ್ ಸವಾರರು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ನಡೆದಿದೆ.

ಸುಳ್ಯ-ಕಾಸರಗೋಡು ಅಂತರ್ ರಾಜ್ಯ ರಸ್ತೆಯಲ್ಲಿ ಕಾಡಾನೆ ಸಂಚರಿಸುತ್ತಿದ್ದ ವೇಳೆ ಪಂಜಿಕಲ್ಲು ಎಂಬಲ್ಲಿ ರಸ್ತೆಯ ತಿರುವಿನಲ್ಲಿ ಬೈಕ್ ಸವಾರರಿಗೆ ಕಾಡಾನೆ ಎದುರಾಗಿದೆ.

ತಿರುವಿನಲ್ಲಿ ಬೈಕ್ ಎದುರಾದ ಕೂಡಲೇ ಆನೆ ಘೀಳಿಟ್ಟಿದ್ದು ಬೈಕ್ ಸವಾರರು ಸೆಕೆಂಡ್ ಗಳ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಕಾಡಾನೆಯಿಂದ ಬೈಕ್ ಸವಾರರು ಪಾರಾದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೆಲವು ದಿನಗಳಿಂದ ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಓಡಾಟ ನಡೆಸುತ್ತಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!