- Advertisement -


- Advertisement -
ಸುಳ್ಯ; ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಆಲೆಟ್ಟಿಯ ಶಶಿಧರ್ ಮೃತ ದುರ್ದೈವಿ.
ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಜೀಪ್ ಮತ್ತು ಬೈಕ್ ನಡುವಿನ ಅಪಘಾತ ಸಂಭವಿಸಿತ್ತು.ಅಪಘಾತದಲ್ಲಿ ಬೈಕ್ ಸವಾರ ಆಲೆಟ್ಟಿಯ ಶಶಿಧರ್ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಜೀಪ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಜೀಪ್ ಪಲ್ಟಿಯಾಗಿತ್ತು. ಇದೇ ವೇಳೆ ಜೀಪ್ ನಲ್ಲಿದ್ದವರಿಗೂ ಗಾಯಗಳಾಗಿತ್ತು.
- Advertisement -


