Friday, June 5, 2026
Homeಕರಾವಳಿಮಂಗಳೂರು: ಬೈಕ್‌ ಡಿಕ್ಕಿಯಾಗಿ ಮಹಿಳೆ  ಸಾವು

ಮಂಗಳೂರು: ಬೈಕ್‌ ಡಿಕ್ಕಿಯಾಗಿ ಮಹಿಳೆ  ಸಾವು

- Advertisement -
- Advertisement -

ಮಂಗಳೂರು: ಬೈಕ್‌ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಬುಧವಾರ ಯೆಯ್ನಾಡಿ ಕೊಂಚಾಡಿ ಬಳಿ ನಡೆದಿದೆ.

ಸರಿತಾ ಜುಡಿತ್‌ ಪಿಂಟೋ (65) ಮೃತ ಮಹಿಳೆ. ಸರಿತಾ ಎಂದಿನಂತೆ ಗುಜರಿ ಹೆಕ್ಕಲು ಗೋಣಿ ಚೀಲ ಹಿಡಿದುಕೊಂಡು ಬೆಳಗ್ಗೆ 6 ಗಂಟೆಯ ಸುಮಾರಿಗೆ ಯೆಯ್ನಾಡಿ ಕೊಂಚಾಡಿ ಶಂಕರ ಭವನ ಹೊಟೇಲ್‌ ಬಳಿ ಪದವಿನಂಗಡಿ ಕಡೆಯಿಂದ ಕೆಪಿಟಿ ಕಡೆಗೆ ಹೋಗುವ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ರಸ್ತೆಯಲ್ಲಿ ಪದವಿನಂಗಡಿ ಕಡೆಯಿಂದ ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮ

ಗಂಭೀರವಾಗಿ ಗಾಯಗೊಂಡ  ಅವರನ್ನು ಸ್ಥಳೀಯರು ಮತ್ತು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಅಷ್ಟರಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!