Friday, June 5, 2026
Homeಕರಾವಳಿಮೂಡಬಿದರೆ; ಮನೆಯಿಂದ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

ಮೂಡಬಿದರೆ; ಮನೆಯಿಂದ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ

- Advertisement -
- Advertisement -

ಮೂಡಬಿದರೆ; ಮನೆಯಿಂದ ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಬೆಳುವಾಯಿ ಗ್ರಾಮದ ಮೂಡಾಯಿಕಾಡ್‌ ನಲ್ಲಿ ನಡೆದಿದೆ. ಇಲ್ಲಿನ ಈಶ್ವರ (55) ಎ. 9ರಂದು ಕೆಲಸಕ್ಕೆಂದು ಹೋದವರು ವಾಪಾಸ್ ಮನೆಗೆ ಬಂದಿಲ್ಲ ಎಂದು ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ವಾಪಸ್‌ ಮನೆಗೆ ಬಾರದೇ  ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಈಶ್ವರ ಅವರು ಸುಮಾರು 5.3 ಅಡಿ ಎತ್ತರವಿದ್ದು  ಎಣ್ಣೆಗಪ್ಪು ಮೈಬಣ್ಣ  ಹೊಂದಿದ್ದಾರೆ. ದುಂಡು ಮುಖ, ಅರೆನರೆತ ಕಪ್ಪು ಮೀಸೆ ಹೊಂದಿದ್ದಾರೆ. ಅವರು  ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಅರ್ಧತೋಳಿನ ಶರ್ಟ್‌, ಕಪ್ಪು ಪ್ಯಾಂಟ್‌ ಧರಿಸಿದ್ದರು. ಇವರು ತುಳು, ಕನ್ನಡ ಭಾಷೆ ಬಲ್ಲವರಾಗಿದ್ದು ಎಲೆ ಅಡಿಕೆ ತಿನ್ನುವ ಹವ್ಯಾಸ ಹೊಂದಿದ್ದಾರೆ.ಅವರ ಸುಳಿವು ಸಿಕ್ಕರೆ ಮೂಡುಬಿದಿರೆ ಪೊಲೀಸ್‌ ಠಾಣೆ (08258-236333)ಯನ್ನು ಅಥವಾ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿ (0824-2220801)ಯನ್ನು ಸಂಪರ್ಕಿಸಬೇಕಾಗಿದೆ ಎಂದು ಪೊಲೀಸ್‌ ಪ್ರಕಟನೆಯಲ್ಲಿ ತಿಳಿಸಿಲಾಗಿದೆ.

- Advertisement -

Latest News

error: Content is protected !!