Tuesday, May 14, 2024
Homeಇತರತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬೈಕ್ ಅಪಘಾತ...! 20 ಅಡಿ ಆಳದ ರಸ್ತೆಗೆ ಬಿದ್ದು ಸವಾರ ಸಾವು..!

ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬೈಕ್ ಅಪಘಾತ…! 20 ಅಡಿ ಆಳದ ರಸ್ತೆಗೆ ಬಿದ್ದು ಸವಾರ ಸಾವು..!

spot_img
- Advertisement -
- Advertisement -

ತೊಕ್ಕೊಟ್ಟು: ಬೈಕ್ ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟು, ಬೈಕ್ ಸವಾರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರದಂದು ಸಂಜೆ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಕುಂಪಲ ಸರಳಾಯ ಕಾಲನಿ ನಿವಾಸಿ ಸುಬ್ರಹ್ಮಣ್ಯ ರಾವ್ ಸಿಂಧ್ಯ(45) ಎಂದು ಗುರುತಿಸಲಾಗಿದೆ.

ಇಂದು ಸಂಜೆ ಸುಬ್ರಹ್ಮಣ್ಯ ಅವರು ಮಂಗಳೂರಿನಿಂದ ಕುಂಪಲ ಕಡೆಗೆ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಮೇಲ್ಸೇತುವೆಯಿಂದ 20 ಅಡಿ ಆಳದ ಸರ್ವಿಸ್ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದು, ಸುಬ್ರಹ್ಮಣ್ಯ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.

ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!