Monday, May 20, 2024
Homeಕರಾವಳಿವಿಟ್ಲದಲ್ಲಿ ಬೈಕ್ ಗೆ 112 ತುರ್ತು ಸೇವಾ ವಾಹನ ಡಿಕ್ಕಿ : ಇಬ್ಬರಿಗೆ ಗಾಯ

ವಿಟ್ಲದಲ್ಲಿ ಬೈಕ್ ಗೆ 112 ತುರ್ತು ಸೇವಾ ವಾಹನ ಡಿಕ್ಕಿ : ಇಬ್ಬರಿಗೆ ಗಾಯ

spot_img
- Advertisement -
- Advertisement -

ವಿಟ್ಲ : ನಿಂತಿದ್ದ ಬೈಕ್ ಗೆ 112 ತುರ್ತು ಸೇವಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ವಿಟ್ಲ ಹೊರವಲಯದ ಕಡೂರು – ಕಾಂಞಂಗಾಡು ಅಂತಾರಾಜ್ಯ ಹೆದ್ದಾರಿಯ ಕಾಶಿಮಠ ಎಂಬಲ್ಲಿ ನಡೆದಿದೆ.

ವಿನಯ್ (35), ಶಿವರಾಮ್ (22) ಗಾಯಗೊಂಡವರು. ಅವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಕ್ಕುಡ ಕಡೆಯಿಂದ ಆಗಮಿಸುತ್ತಿದ್ದ ಬೈಕ್ ಸವಾರರು ಮುಂಭಾಗದಿಂದ ವಾಹನ ಬರುವ ಕಾರಣಕ್ಕೆ ನಿಲ್ಲಿಸಿದ್ದಾರೆ. ಈ ವೇಳೆ ಹಿಂದಿನಿಂದ ಬಂದ 112 ತುರ್ತು ವಾಹನ ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!