Friday, June 5, 2026
Homeಕರಾವಳಿಉಡುಪಿಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

- Advertisement -
- Advertisement -

ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ರಕ್ಷಣೆ ಮಾಡಿರುವ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿನ್ನೆ ಮಧ್ಯ ರಾತ್ರಿ ನಡೆದಿದೆ. ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಕಾಪು ಪೊಲೀಸರ ಸಹಾಯದಿಂದ ಮಹಿಳೆಯನ್ನು  ರಕ್ಷಿಸಿ ಉಡುಪಿಯ ಸಖಿ ಒನ್ ಸ್ಟಾಪ್ ಸೆಂಟರಿಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಮೂಲತಃ ಬಿಹಾರದ ಫುಲ ಕುಮಾರಿ (35) ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹದಿಂದ ತಾನು ಬೀದಿ ಪಾಲಾಗಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಮಹಿಳೆಯ ಅಸಹಾಯಕತೆಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಮಧ್ಯರಾತ್ರಿ ತನ್ನ ವಾಹನದಲ್ಲಿ ಕಾಪುಗೆ ತೆರಳಿ ಮಹಿಳೆಯನ್ನು ರಕ್ಷಿಸಿದರು. ಮಹಿಳೆಯ ಸಂಬಂಧಿಕರು ಅಥವಾ ಸಂಬಂಧಪಟ್ಟವರು ಇದ್ದಲ್ಲಿ ಕಾಪು ಪೊಲೀಸ್ ಠಾಣೆ ಅಥವಾ ಸಖಿ ಒನ್ ಸ್ಟಾಪ್ ಸೆಂಟರ್ ಸಂಪರ್ಕಿಸುವಂತೆ ಕೋರಲಾಗಿದೆ.

- Advertisement -

Latest News

error: Content is protected !!