Wednesday, July 15, 2026
Homeಕರಾವಳಿಸುಳ್ಯ: ಸಂಪಾಜೆಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರ ಬಂಧನ

ಸುಳ್ಯ: ಸಂಪಾಜೆಯಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರ ಬಂಧನ

- Advertisement -
- Advertisement -

ಸುಳ್ಯ: ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಸುಳ್ಯ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ದಿಲೀಪ್ ಅವರು ಬಂಧಿಸಿದ್ದಾರೆ.

ನೆಲ್ಲಿಕುಮೇರಿಯ ಪ್ರಕಾಶ್ (23), ಜಾಯಲ್ ಡಿಸೋಜ (22) ಬಂಧಿತರು. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಇವರನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ.

ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎನ್ನಲಾಗಿದೆ.

- Advertisement -

Latest News

error: Content is protected !!