Sunday, June 14, 2026
Homeತಾಜಾ ಸುದ್ದಿಬಿಗ್‌ ಬಾಸ್‌ ಮಾಜಿ ಸ್ಪರ್ಧಿಯ ಅಚ್ಚರಿಯ ನಿರ್ಧಾರ; ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ 

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಯ ಅಚ್ಚರಿಯ ನಿರ್ಧಾರ; ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ 

- Advertisement -
- Advertisement -

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ -10 ರಲ್ಲಿ  ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಪವಿ ಪೂವಪ್ಪ ಇದೀಗ ಮತ್ತೆ ಸುದ್ದಿಯಾಗುತ್ತಿದ್ದಾರೆ. 

ಫ್ಯಾಷನ್‌ ಡಿಸೈನರ್‌ ಕಂ ಮಾಡೆಲ್‌ ಆಗಿರುವ ಪವಿ ಇತ್ತಿಚೆಗೆ ಸುದ್ದಿ ಮಾಧ್ಯಮವೊಂದರ ಜತೆಗಿನ ಸಂದರ್ಶನದಲ್ಲಿ ತಮ್ಮ ಬ್ರೇಕ್ ಅಫ್ ಬಗ್ಗೆ ಮಾತನಾಡಿದ್ದಾರೆ.  

ನಾನು ಮತ್ತೆ ನನ್ನ ಬಾಯ್ ಫ್ರೆಂಡ್ ಡಿಜೆ ಮ್ಯಾಡ್‌ 5 ವರ್ಷಗಳಿಂದ ಜತೆಯಲ್ಲೇ ಇದ್ದೆವು. ಎಲ್ಲವನ್ನು ಅರ್ಥ ಮಾಡಿಕೊಂಡು ಚೆನ್ನಾಗಿದ್ದೆವು. ಆದರೆ ಹೋಗುತ್ತಾ ಹೋಗುತ್ತಾ ಅವರಿಗೆ ನನ್ನ ನಾಯಿಯಿಂದ ಪ್ರಾಬ್ಲಂ ಆಯಿತು. ಮದುವೆ ಆದ್ಮೇಲೆ ನಾಯಿಯನ್ನು ಮನೆಯಲ್ಲಿಡಲು ಬಿಡಲ್ಲ ಅಂಥ ಹೇಳಿದ್ರು. ನಂತರದಲ್ಲಿ ಸಣ್ಣ ಸಣ್ಣ ವಿಚಾರಗಳಿಗು ಕಾರಣವನ್ನು ಕೊಡೋಕೆ ಶುರು ಮಾಡಿದ್ರು. ಈ ಕಾರಣಕ್ಕೆ ನಾನು ರಿಲೇಷನ್ ಶಿಫ್ ಅನ್ನು ಮುಂದುವರಿಸಲು ಇಷ್ಟಪಡಲಿಲ್ಲ. ಬ್ರೇಕ್ ಅಪ್ ಮಾಡಿಕೊಂಡೆ ಎಂದು ತಿಳಿಸಿದರು. 

ನನಗೆ ಚಿಕ್ಕಂದಿನಿಂದಲೂ ನಾಯಿ, ಬೆಕ್ಕುಗಳಂದ್ರೆ ತುಂಬಾ ಪ್ರೀತಿ. ನನ್ನ ಮನೆಯಲ್ಲಿ 7 ನಾಯಿಗಳಿವೆ. ನಮ್ಮದು ಎನ್‌ ಜಿಒ ಕೂಡಯಿದೆ. ನಾವು ನಾಯಿಗಳನ್ನು ರಕ್ಷಣೆ ಮಾಡಿ ಆರೈಕೆ ಮಾಡುತ್ತೇವೆ ಎಂದರು. 

- Advertisement -

Latest News

error: Content is protected !!