- Advertisement -
- Advertisement -
ಹೊಸದಿಲ್ಲಿ: ರೆಡ್ ಬುಲ್ ಉತ್ಪನ್ನದ ಮೇಲೆ ‘ಎನರ್ಜಿ ಡ್ರಿಂಕ್’ ಪದ ಬಳಸದಂತೆ ಎಫ್‌ಎಸ್‌ಎಸ್‌ಎಐ ಹೊರಡಿಸಿದ್ದ ಆದೇಶವನ್ನು ದಿಲ್ಲಿ ಹೈಕೋರ್ಟ್ ರದ್ದುಗೊಳಿಸಿದೆ.
ಕಂಪನಿಗೆ ತನ್ನ ವಾದ ಮಂಡಿಸಲು ಅಥವಾ ಲಿಖಿತ ಉತ್ತರ ನೀಡಲು ಸೂಕ್ತ ಅವಕಾಶ ನೀಡದೆ ಆದೇಶ ಹೊರಡಿಸಲಾಗಿದೆ ಎಂದು ನ್ಯಾ. ಅಮಿತ್ ಮಹಾಜನ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಇದು ನೈಸರ್ಗಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐನ ಜೂನ್ 30ರ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ರೆಡ್ ಬುಲ್‌ಗೆ ಶೋಕಾಸ್ ನೋಟಿಸ್ ನೀಡಿ, ಸರಿಯಾದ ಕಾನೂನು ಪ್ರಕ್ರಿಯೆ ಹಾಗೂ ವಿಚಾರಣೆ ನಡೆಸಿದ ಬಳಿಕ ಈ ಕುರಿತು ಹೊಸ ಆದೇಶ ಹೊರಡಿಸಲು ಎಫ್‌ಎಸ್‌ಎಸ್‌ಎಐಗೆ ನ್ಯಾಯಾಲಯ ಅವಕಾಶ ನೀಡಿದೆ.
- Advertisement -


