Friday, June 27, 2025
Homeಕರಾವಳಿಕಾರವಾರದಲ್ಲಿ ಬಲೆಗೆ ಬಿದ್ದ 500 ಕೆಜಿ ತೂಕದ ತೊರಕೆ ಮೀನು: ಈ ಮೀನಿನ ಬೆಲೆ ಬರೋಬ್ಬರಿ...

ಕಾರವಾರದಲ್ಲಿ ಬಲೆಗೆ ಬಿದ್ದ 500 ಕೆಜಿ ತೂಕದ ತೊರಕೆ ಮೀನು: ಈ ಮೀನಿನ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ

spot_img
- Advertisement -
- Advertisement -

ಕಾರವಾರ: ಅಕ್ಟೋಬರ್ 22 ರಂದು ಮಲ್ಪೆಯ ನಾಗಸಿದ್ದಿ ಎಂಬ ಹೆಸರಿನ ಬೋಟ್ ನವರಿಗೆ 750 ಕೆಜಿ ತೂಕದ ತೊರಕೆ ಮೀನು ಸಿಕ್ಕಿ ಭಾರೀ ಸುದ್ದಿಯಾಗಿದ್ದು. ಅದರ ಬೆನ್ನಲ್ಲೇ ಇಂದು 500 ಕೆ.ಜಿ.ಗೂ ಹೆಚ್ಚು ತೂಕವಿರುವ ಬೃಹತ್ ಗಾತ್ರದ ಮೂರು ತೊರ್ಕೆ ಮೀನುಗಳು ಭಟ್ಕಳ ಮೀನುಗಾರರ ಬಲೆಗೆ ಬಿದ್ದಿದ್ದು, ಮೀನುಗಾರರು ಫುಲ್ ಖುಷ್ ಆಗಿದ್ದಾರೆ.

ಇಂದು ಬೆಳಗ್ಗೆ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ ಬೋಟ್ ಗಳಿಗೆ ಬ್ರಹತ್ ಗಾತ್ರದ ಮೂರು ತೊರ್ಕೆ ಮೀನು ಸಿಕ್ಕಿದ್ದು, ಪ್ರತಿ ಮೀನಿನ ತೂಕ 500 ಕೆ.ಜಿ. ಮೀರಿಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 2 ಮೀಟರ್ ಗೂ ಅಧಿಕ ಉದ್ದದ ಈ ಮೀನುಗಳನ್ನು ಹರಸಾಹಸಪಟ್ಟು ಮೀನುಗಾರರು ದಡಕ್ಕೆ ತಂದಿದ್ದು ಕ್ರೇನ್ ಮೂಲಕ ಬೋಟ್ ನಿಂದ ಮೇಲೆತ್ತಲಾಗಿದೆ.

ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತವೆ. ಈ ಬೃಹತ್ ಗಾತ್ರದ ಮೀನನ್ನು ನೋಡಲು ಇಂದು ಮುಂಜಾನೆ ಭಟ್ಕಳ ಬಂದರಿನಲ್ಲಿ ನೂರಾರು ಜನ ಸೇರಿದ್ದು, ಕಳೆದೆರಡು ದಿನಗಳಿಂದ ಬೃಹತ್ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿವೆ.

- Advertisement -
spot_img

Latest News

error: Content is protected !!