Thursday, June 25, 2026
Homeಇತರಬಿಗ್‌ಬಾಸ್ 2ನೇ Inningsಗೆ ಅಂಕಣ ಸಿದ್ಧ..!!

ಬಿಗ್‌ಬಾಸ್ 2ನೇ Inningsಗೆ ಅಂಕಣ ಸಿದ್ಧ..!!

- Advertisement -
- Advertisement -

ಬೆಂಗಳೂರು_ಬಿಗ್‌ಬಾಸ್ ಕನ್ನಡದ 8ನೇ ಸೀಸನ್ ಲಾಕ್‌ಡೌನ್ ಜಾರಿ ಆಗಿದ್ದರಿಂದ ಅರ್ಧಕ್ಕೆ ನಿಂತಿತ್ತು. ಬಿಗ್‌ಬಾಸ್ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. ಆದ್ರೆ ಅರ್ಧಕ್ಕೆ ನಿಂತಿದ್ದ ಬಿಗ್‌ಬಾಸ್ ಸೀಸನ್ ಈಗ ಮತ್ತೆ ಆರಂಭವಾಗುವ ಸುಳಿವು ಸಿಕ್ಕಿದೆ. ಬಿಗ್‌ಬಾಸ್ ಕನ್ನಡದ 8ನೇ ಸೀಸನ್‌ನ 2ನೇ ಇನ್ನಿಂಗ್ಸ್ ದೊಡ್ಡ ಬ್ರೇಕ್ ಬಳಿಕ ಆರಂಭವಾಗಲಿದೆ. ಬಿಗ್‌ಬಾಸ್‌ನ 2ನೇ ಇನ್ನಿಂಗ್ಸ್ನಲ್ಲಿ ಮನೆಯಿಂದ ಕೊನೆಯ ದಿನ ಹೊರ ಹೋದ 12 ಮಂದಿ ಸ್ಪರ್ಧಿಗಳೊಂದಿಗೆ ಮತ್ತೆ ಮುಂದುವರೆಸುವ ಸಾಧ್ಯತೆ ಇದೆ.

ಕನ್ನಡದ ಕಿರುತೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 8 ಕೊನೆಗೊಳ್ಳಲು 29 ದಿನಗಳು ಬಾಕಿ ಇತ್ತು. ಆಗಲೇ ಕಾರ್ಯಕ್ರಮ ಅರ್ಧಕ್ಕೆ ಕೊನೆಗೊಳ್ಳಲಿದೆ ಅನ್ನೋ ಸುದ್ದಿ ಹೊರ ಬಿದ್ದಿತ್ತು. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಕಾರ್ಯಕ್ರಮ ಕೊರೋನಾ ಕಾರಣದಿಂದ ರದ್ದಾಗಿತ್ತು.

- Advertisement -

Latest News

error: Content is protected !!