Wednesday, June 24, 2026
Homeಕರಾವಳಿಬೆಳ್ತಂಗಡಿ : ಅಪರಿಚಿತ ವ್ಯಕ್ತಿಗಳಿಗೆ ವಿಳಾಸ ಹೇಳದ ವಿಚಾರದಲ್ಲಿ ಇಬ್ಬರಿಗೆ ಹಲ್ಲೆ ಪ್ರಕರಣ; ಭಾಸ್ಕರ್ ನಾಯ್ಕ್...

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಗಳಿಗೆ ವಿಳಾಸ ಹೇಳದ ವಿಚಾರದಲ್ಲಿ ಇಬ್ಬರಿಗೆ ಹಲ್ಲೆ ಪ್ರಕರಣ; ಭಾಸ್ಕರ್ ನಾಯ್ಕ್ ಗೆ ಸೆಷನ್ಸ್ ಕೋರ್ಟ್ ನಿಂದ ಜಾಮೀನು ಮಂಜೂರು

- Advertisement -
- Advertisement -

ಬೆಳ್ತಂಗಡಿ: ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ವಿಳಾಸ ತಿಳಿಸದ ಕಾರಣ ಇಬ್ಬರಿಗೆ ಹಲ್ಲೆ ಮಾಡಿರುವ ಘಟನೆ ಆಗಸ್ಟ್ 2 ರಂದು ಸಂಜೆ ಉಜಿರೆ ಗ್ರಾಮದ ಪಾಣಿಯಾಲು ಎಂಬಲ್ಲಿ ನಡೆದಿತ್ತು. ಈ ಪ್ರಕರಣದ ಆರೋಪಿಯಾಗಿದ್ದ  ಭಾಸ್ಕರ್ ನಾಯ್ಕ್ ಮೇಲೆ ಪ್ರಕರಣ ದಾಖಲಾಗಿದೆ. ಸಪ್ಟೆಂಬರ್ 16 ರಂದು(ಇಂದು) ಭಾಸ್ಕರ್ ನಾಯ್ಕ್ @ ಬೇಬಿ ಗೆ ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

*ಪ್ರಕರಣದ ವಿವರ:* ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪಾಣಿಯಾಲು ನಿವಾಸಿ ಉಷಾ ಎಂಬವರ ಬಳಿ ಕಾರಿನಲ್ಲಿ ಅಪರಿಚಿತ ವ್ಯಕ್ತಿಗಳು ಬಂದು ಮಹೇಶ್ ಶೆಟ್ಟಿ ತಿಮರೋಡಿಯ ವಿಳಾಸ ಕೇಳಿದ್ದು ಅದಕ್ಕೆ ಅವರು ವಿಳಾಸ ತಿಳಿಸದೆ ಇದ್ದು. ಬಳಿಕ ಆಗಸ್ಟ್ 2 ರಂದು ಸಂಜೆ 6:30 ಕ್ಕೆ ಬಿಳಿ ಕಾರಿನಲ್ಲಿ ಬಂದ ಬಾಸ್ಕರ ನಾಯ್ಕ್ ಯಾನೆ ಬೇಬಿ ಎಂಬಾತ ಸಿಟ್ಟಿನಿಂದ ಉಷಾ ಎಂಬರ ಬಲಬಭುಜ ತಲ್ಲಿದ ಪರಿಣಾಮವಾಗಿ ಉಷಾ ಎಂಬರು ನೆಲಕ್ಕೆ ಬಿದ್ದು ನೋವಾಗಿದ್ದು. ಈ ವೇಳೆ ಬೊಬ್ಬೆ ಹಾಕಿದಾಗ ಜನ ಸೇರುವುದನ್ನು ಗಮನಿಸಿ ಭಾಸ್ಕರ್ ನಾಯ್ಕ್ ಉಷಾ ಎಂಬವರ ಮನೆಯ ಮುಂದಿನ ಬಾಗಿಲ ಮೂಲಕ ಅಕ್ರಮವಾಗಿ ಪ್ರವೇಶ ಮಾಡಿ ಹಿಂಬಾಗಿಲಿನ ಮೂಲಕ ಓಡಿಹೋಗಿ ತೋಟದಲ್ಲಿದ್ದ ಆತನನ್ನು ಬೊಬ್ಬೆ ಕೇಳಿ ಬಂದ ಸತೀಶ್ ಮತ್ತು ಮತ್ತಿತರರು ಏನಾಯಿತು ಎಂದು ವಿಚಾರಿಸಿದಾಗ ಸತೀಶ್ ಎಂಬಾತನ ಬಲಕಾಲಿಗೆ ಕಾಲಿನಿಂದ ತುಳಿದು ಬಲಕೆನ್ನೆಗೆ ಕೈಯಿಂದ ಹೊಡೆದು ,ಅಂಗಿಯನ್ನು ಹಾರಿದು ಹಾಕಿದ ಭಾಸ್ಕರ್ ನಾಯ್ಕ್ ನನ್ನು ಹಿಡಿದು ಕುರಿಸಿ ಅಪರಿಚಿತ ವ್ಯಕ್ತಿಗಳನ್ನು ವಿಚಾರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಭಾಸ್ಕರ್ ನಾಯ್ಕ್ ಸಮಯ ಸಾಧಿಸಿ ತಪ್ಪಿಸಿಕೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭಾಸ್ಕರ್ ನಾಯ್ಕ್ ದಾಖಲಾಗಿದ್ದು. ನಂತರ ಅದೆ ಆಸ್ಪತ್ರೆಗೆ ಸತೀಶನೂ ದಾಖಲಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು.

ತಿಮರೋಡಿ ಮಹೇಶ್ ಶೆಟ್ಟಿ ತಂಡದಿಂದ ಹಲ್ಲೆಗೊಳಗಾದ ಭಾಸ್ಕರ್ ನಾಯ್ಕ್@ ಬೇಬಿ ಸಧ್ಯ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಾಸ್ಕರ್ ನಾಯ್ಕ್ ಪರ ಮಂಗಳೂರು ನ್ಯಾಯವಾದಿ ಮಯೂರ ಕೀರ್ತಿ ಮತ್ತು ಗಿರೀಶ್ ಶೆಟ್ಟಿ ವಾದಿಸಿದರು.

- Advertisement -

Latest News

error: Content is protected !!