Wednesday, June 3, 2026
Homeಕರಾವಳಿಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆಯನ್ನು ಖಂಡಿಸಿದ ಶಾಸಕ ಭರತ್ ಶೆಟ್ಟಿ

ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ಹಲ್ಲೆಯನ್ನು ಖಂಡಿಸಿದ ಶಾಸಕ ಭರತ್ ಶೆಟ್ಟಿ

- Advertisement -
- Advertisement -

ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿರೋದನ್ನು ಶಾಸಕ ಭರತ್ ಶೆಟ್ಟಿ ಖಂಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಪೊಲೀಸರ ಅತಿರೇಕದ ವರ್ತನೆಗೆ ವಜಾ ಅಲ್ಲ, ಮನೆಗೆ ಕಳಿಸುವ ಕೆಲಸವನ್ನು ಇಲಾಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ಅತ್ಯಾಚಾರವಾದರೆ, ಮಾದಕ ದ್ರವ್ಯ ಜಾಲದಲ್ಲಿ ಸಿಕ್ಕಿ ಬಿದ್ದವರಿಗೆ ಪೊಲೀಸರ ರಾಜಾತಿಥ್ಯ ಸಿಗುತ್ತದೆ. ಸನಾತನ ಧರ್ಮ ಹಿಂದುತ್ವದ ಪರ ಕೆಲಸ ಮಾಡಿದರೆ, ಇಲ್ಲವೇ ಯಾವುದೋ ದ್ವೇಷದಿಂದ ಪೊಲೀಸ್ ಇಲಾಖೆ ಲಾಠಿ ಬೀಸಿ ಕೈ ಕಾಲು ಮುರಿಯುವ ಕೆಲಸ ಮಾಡುತ್ತಿದೆ.ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ನಿಮಗೆ ತಿಳಿಯದೆ ಈ ಗಂಭೀರ ಕೃತ್ಯ ಆಗಿದೆಯೆ, ಲಾಕಪ್ ಟಾರ್ಚರ್ ವಿರುದ್ದ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರನ್ನು ಮನೆಗೆ ಕಳಿಸಿ, ಇತರರಿಗೆ ಇದು ಪಾಠವಾಗಬೇಕು ಎಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!