- Advertisement -
- Advertisement -
ಕಡಬದಲ್ಲಿ ರಿಕ್ಷಾ ಚಾಲಕರಿಗೆ ರಕ್ಷೆ ಕಟ್ಟಿ ಶಾಸಕಿ ಭಾಗೀರಥಿ ಮುರುಳ್ಯ ರಕ್ಷಾ ಬಂಧನ ಆಚರಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕಾರ್ಯಕ್ರಮ ವೀಕ್ಷಣೆಯ ಸಮಾರಂಭ ದಲ್ಲಿ ಭಾಗವಹಿಸುವುದಕ್ಕಾಗಿ ಕಡಬ ಪಟ್ಟಣ ಪಂಚಾಯಿತಿ ಸಭಾಂಗಣಕ್ಕೆ ಆಗಮಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಳ ಅವರು ಮೊದಲು ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ರಕ್ಷೆ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿ ದರು.
ಬಳಿಕ ಕೊಂಬಾರು ಹಾಗೂ ಶಿರಿಬಾಗಿಲಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಸೇರಿದ್ದವರಿಗೆ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದರು. ಶಾಸಕರನ್ನು ಭೇಟಿಯಾಗಲು ಆಗಮಿಸಿದ ಕಡಬದ ನೂತನ ಎಸ್‌ಐ ಅಭಿನಂದನ್ ಎಂ.ಎಸ್., ಪಟ್ಟಣ ಪಂ. ಮುಖ್ಯಾಧಿಕಾರಿ ಫಕೀರ ಮೂಲ್ಯ ಹಾಗೂ ಸಿಬ್ಬಂದಿಗೆ ರಕ್ಷೆ ಕಟ್ಟಿ ಶುಭ ಕೋರಿದ್ದಾರೆ.
- Advertisement -