ಬೆಂಗಳೂರು : ಕಾಂಗ್ರೆಸ್ ಸೇರುತ್ತಿರುವ ಬಿಹೆಚ್ ಚಂದ್ರಶೇಖರ್ ಅವರನ್ನು ಜೆಡಿಎಸ್ ನಿಂದ ಉಚ್ಚಾಟಿಸಲಾಗಿದೆ. ಜೆಡಿಎಸ್ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದಂತ ಬಿಹೆಚ್ ಚಂದ್ರಶೇಖರ್ ಅವರು ಉಪ ಚುನಾವಣೆಯ ಹೊತ್ತಿನಲ್ಲಿಯೇ ಪಕ್ಷಕ್ಕೆ ಶಾಕ್ ನೀಡಿ ಕೈ ಸೇರ್ಪಡೆಗೆ ಸಿದ್ಧವಾಗಿದ್ದರು ಆದ್ದರಿಂದ ಬಿಹೆಚ್ ಚಂದ್ರಶೇಖರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಜೆಡಿಎಸ್ ಮುಂದಿನ 6 ವರ್ಷಗಳ ವರೆಗೆ ಪಕ್ಷದಿಂದ ಉಚ್ಚಾಟಿಸಿದೆ.
ಈ ಕುರಿತಂತೆ ಬೆಂಗಳೂರು ಮಹಾನಗರ ಜನತಾದಳದ ಅಧ್ಯಕ್ಷರಾದಂತ ಆರ್ ಪ್ರಕಾಶ್ ಆದೇಶ ಹೊರಡಿಸಿದ್ದು, ಪಕ್ಷದ ಮಹಾಪ್ರಧಾನ ಕಾರ್ಯದರ್ಶಿಯಾಗಿದ್ದ ಬಿಹೆಚ್ ಚಂದ್ರಶೇಖರ್ ನಿಮಗೆ ಪಕ್ಷವು ರಾಜ್ಯ ಮಟ್ಟದಲ್ಲಿಯೂ ಸಹ ಹಲವಾರು ಅವಕಾಶಗಳನ್ನು ನೀಡಿದೆ. ತಾವು ಪಕ್ಷದಿಂದ ಸಾಕಷ್ಟ ಅನುಕೂಲಗಳನ್ನು ಪಡೆದಿದ್ದರೂ ಈ ಸ್ಥಾನಗಳನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ.ಆದ್ದರಿಂದ ನಿಮ್ಮನ್ನು ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಜೆಡಿಎಸ್ ಮುಂದಿನ 6 ವರ್ಷಗಳ ವರೆಗೆ ಪಕ್ಷದಿಂದ ಉಚ್ಚಾಟಿಸಿದೆ, ಎಂದು ಅವರು ತಿಳಿಸಿದರು.