Wednesday, June 24, 2026
Homeಕರಾವಳಿಉಡುಪಿಉಡುಪಿ: ಹಿಜಾಬ್ ಕಾರಣಕ್ಕೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಸರ್ಕಾರ ತಡೆ ಆರೋಪ; ಅಲ್ಲಗಳೆದ ರಾಜ್ಯ ಸರ್ಕಾರ

ಉಡುಪಿ: ಹಿಜಾಬ್ ಕಾರಣಕ್ಕೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಸರ್ಕಾರ ತಡೆ ಆರೋಪ; ಅಲ್ಲಗಳೆದ ರಾಜ್ಯ ಸರ್ಕಾರ

- Advertisement -
- Advertisement -

ಉಡುಪಿ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರಿಗೆ ಘೋಷಣೆಯಾಗಿದ್ದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ.

ಎರಡು ವರ್ಷದ ಹಿಂದೆ ಕಾಲೇಜಿನಲ್ಲಿ ನಡೆದಿದ್ದ ಹಿಜಾಬ್ ಗಲಾಟೆಯ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.

ಅಂದು ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ನಲ್ಲಿ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ತಡೆದಿದ್ದರು. ವಿದ್ಯಾರ್ಥಿನಿಯರನ್ನು ತಡೆದಿದ್ದ ಪೋಟೋ ವೈರಲ್ ಕೂಡಾ ಆಗಿತ್ತು.

ಹೀಗಾಗಿ ಘೋಷಿತ ಪ್ರಶಸ್ತಿ ಹಿಂಪಡೆಯುವಂತೆ ಹಿಜಾಬ್ ಪರ ಹೋರಾಟಗಾರರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಮಣಿದು ರಾಜ್ಯ ಸರ್ಕಾರ ರಾಮಕೃಷ್ಣ ಅವರ ಪ್ರಶಸ್ತಿಯನ್ನು ತಡೆ ಹಿಡಿದಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಹಿಜಾಬ್ ಕಾರಣಕ್ಕೆ ಪ್ರಶಸ್ತಿಯನ್ನು ತಡೆ ಹಿಡಿದಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದರೆ, ಪ್ರಾಂಶುಪಾಲರ ವರ್ತನೆ ಸರಿ ಇರಲಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಬಿಜೆಪಿ ಮುಖಂಡರು ಪ್ರಾಂಶುಪಾಲ ರಾಮಕೃಷ್ಣ ಬೆಂಬಲಕ್ಕೆ ನಿಂತಿದ್ದು, ಕೂಡಲೇ ತಡೆ ಹಿಡಿದಿರುವ ಪ್ರಶಸ್ತಿಯನ್ನು ಪ್ರದಾನ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!