Thursday, June 4, 2026
Homeಕರಾವಳಿಬೆಳುವಾಯಿ: ಶಾಸಕ ಉಮಾನಾಥ ಕೋಟ್ಯಾನ್ ರಿಂದ 380 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಬೆಳುವಾಯಿ: ಶಾಸಕ ಉಮಾನಾಥ ಕೋಟ್ಯಾನ್ ರಿಂದ 380 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

- Advertisement -
- Advertisement -

ಬೆಳುವಾಯಿ: ದಾನಿಗಳ ಸಹಕಾರದಿಂದ ಮಂಗಳೂರು ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ರ ನೇತೃತ್ವದಲ್ಲಿ ಸುಮಾರು 380 ಕುಟುಂಬಗಳಿಗೆ ಅಕ್ಕಿ, ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಕಾನ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜ್ಯ ಅನಂತ ಅಸ್ರಣ್ಣರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಸೋಮನಾಥ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಭಾಸ್ಕರ್ ಆಚಾರ್ಯ, ಸದಸ್ಯರಾದ ಸದಾನಂದ ಶೆಟ್ಟಿ, ಅನಿತಾ, ಸ್ಪಂದನ ಸಮಿತಿ ಸದಸ್ಯರಾದ ಮಂಜುನಾಥ್ ಶೆಟ್ಟಿ, ಸುಚೇತನ್ ಜೈನ್, ಪ್ರವೀಣ್ ಜೈನ್, ನಾಗರಾಜ್ ಶೆಟ್ಟಿ ಅಂಬೂರಿ, ದಿನಕರ್, ಸಂತೋಷ್, ವಿಶ್ವನಾಥ್ ಶೆಟ್ಟಿ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!