ಬೆಳ್ತಂಗಡಿ: ವಿದ್ಯುತ್ ಆಘಾತಕ್ಕೆ ಒಳಗಾಗಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಪುತ್ತಿಲ ಗ್ರಾಮದ ಕೊಪ್ಪರಿಗೆ ಮಜಲು ಎಂಬಲ್ಲಿ ನಡೆದಿದೆ. ಚತ್ತೀಸ್ ಗಡ್ ಮೂಲದ ಕಾರ್ಮಿಕ ಶಿವ ಎಕ್ಕ (33) ಮೃತ ಕಾರ್ಮಿಕ.
ಪುತ್ತಿಲ ನಿವಾಸಿಯಾಗಿರುವ ರಫೀಕ್ ಎಂಬವರು ತಮ್ಮ ತಂದೆಗೆ ಸೇರಿದ ಜಾಗದಲ್ಲಿ ಹಾಳಾದ ಬೋರ್ ವೆಲ್ ಅನ್ನು ರಿಪೇರಿ ಮಾಡಿಸಲು ಫೆ. 3 ರಂದು ಹಮೀದ್ ಎಂಬವರಿಗೆ ಸೇರಿದ ಬೋರ್ ವೆಲ್ ರಿಂಗ್ ವಾಹನವನ್ನು ಕರೆಸಿ ರಿಪೇರಿ ಮಾಡಿಸಿದಾಗ ಬೋರ್ ವೆಲ್ ಕೆಲಸ ಮುಗಿಸಿದ ಬಳಿಕ ಲಾರಿಯ ಡ್ರಿಲ್ ಮಾಡುವ ಯಂತ್ರವನ್ನು ಅದರ ಚಾಲಕ ಸಂಪತ್ ಕುಮಾರ್ ಎಂಬವರು ಸರಿಯಾದ ಜಾಗ್ರತೆ ವಹಿಸದೆ ನಿರ್ಲಕ್ಷ್ಯ ತನದಿಂದ ಕೆಳಗೆ ಇಳಿಸಿದ್ದು ಈ ವೇಳೆ ಇದು ವಿದ್ಯುತ್ ಲೈನಿಗೆ ತಾಗಿದೆ ಈ ಸಂದರ್ಭದಲ್ಲಿ ವಾಹನದ ಸಮೀಪ ನೀರಿನಲ್ಲಿ ನಿಂತಿದ್ದ ಕಾರ್ಮಿಕ ಶಿವ ಎಕ್ಕ ವಿದ್ಯುತ್ ಆಘಾತಕ್ಕೆ ಈಡಾಗಿ ಕೆಳಗೆ ಬಿದ್ದಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಆತ ಮೃತಪಟ್ಟಿದ್ದ. ಘಟನೆಯ ಬಗ್ಗೆ ರಫೀಕ್ ಅವರು ನೀಡಿರುವ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


