Thursday, June 4, 2026
Homeಕರಾವಳಿಚಿಕಿತ್ಸೆ ಫಲಿಸದೇ ಬೆಳ್ತಂಗಡಿ ವಿ.ಎ. ರೂಪೇಶ್ ವಿಧಿವಶ

ಚಿಕಿತ್ಸೆ ಫಲಿಸದೇ ಬೆಳ್ತಂಗಡಿ ವಿ.ಎ. ರೂಪೇಶ್ ವಿಧಿವಶ

- Advertisement -
- Advertisement -

ಬೆಳ್ತಂಗಡಿ : ಕಳೆದ ಕೆಲವು ‌ದಿನಗಳಿದ ಮೆದುಳಿನ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿದ್ದ ಬೆಳ್ತಂಗಡಿಯ ಗ್ರಾಮ ಲೆಕ್ಕಿಗ ರೂಪೇಶ್(38) ಇಂದು ಸಂಜೆ ಚಿಕಿತ್ಸೆ ಫಲಿಸದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ , ಪಟ್ರಮೆ, ಶಿಶಿಲ , ಶಿಬಾಜೆ‌ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ರೂಪೇಶ್ ಮೆದುಳಿನ ರಕ್ತಸ್ರಾವದಿಂದ ಕಳೆದ ಮಾರ್ಚ್ 19 ರಿಂದ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಶನಿವಾರ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು (ಮಾರ್ಚ್ 27 ರಂದು) ಸಂಜೆ ಸಾವನ್ನಪ್ಪಿದ್ದಾರೆ. ರೂಪೇಶ್ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!